ನೈತಿಕ ಪೊಲೀಸ್‌ಗಿರಿ: ಪೊಲೀಸರಿಂದ ಇಬ್ಬರು ಯುವಕರ ಬಂಧನ

ದಾವಣಗೆರೆ: ನೈತಿಕ ಪೊಲೀಸ್‌ಗಿರಿ (Moral Policing) ಮಾಡಿದ್ದ ಇಬ್ಬರು ಯುವಕರನ್ನು ದಾವಣಗೆರೆಯ ಕೆಟಿಜೆ‌ನಗರ ಠಾಣೆಯ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ದಾವಣಗೆರೆಯ (Davanagere) ಎಸ್‌ಪಿ ಡಾ. ಅರುಣ್ ತಿಳಿಸಿದ್ದಾರೆ.

ಶುಕ್ರವಾರ ಕೆಟಿಜೆನಗರ ಠಾಣೆಯ ವ್ಯಾಪಿಗೆ ಬರುವ ಚಿತ್ರಮಂದಿರಕ್ಕೆ ಅನ್ಯಕೋಮಿನ ಯುವಕರ ಜೊತೆ ಯುವತಿಯೊಬ್ಬಳು ಸಿನಿಮಾಗೆ ಬಂದಿದ್ದಳು. ಇದರ ಬಗ್ಗೆ‌ ಮಾಹಿತಿ ತಿಳಿದ ದೊಡ್ಡೇಶ್, ಲಿಂಗರಾಜ್ ಹಾಗೂ ಆತನ ಸ್ನೇಹಿತರು, ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದರು. ಇದನ್ನೂ ಓದಿ: ಖಟಕಬಾವಿ ಗದ್ದೆಯ ಕೊಳವೆಬಾವಿಯಲ್ಲಿ ಜೈನಮುನಿ ಮೃತದೇಹ ಪತ್ತೆ – ಪೀಸ್ ಪೀಸ್ ಮಾಡಿ ಎಸೆದ ಹಂತಕರು

ದೊಡ್ಡೇಶ್ ಎಂಬಾತ ನಟರೊಬ್ಬರ ಅಭಿಮಾನಿ ಸಂಘದ ಮಾಜಿ ಅಧ್ಯಕ್ಷನಾಗಿದ್ದು, ಈಗ ಹಿಂದೂಪರ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದ. ಅಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಹಾಗೂ ಯುವತಿಯನ್ನು ಅಶ್ಲೀಲವಾಗಿ ನಿಂದನೆ ಮಾಡಿ ಪೇಸ್‌ಬುಕ್‌ನಲ್ಲಿ ಲೈವ್ ವೀಡಿಯೋ ಮಾಡಿದ್ದಕ್ಕೆ ಈತನ ವಿರುದ್ಧ ನೈತಿಕ ಪೊಲೀಸ್‌ಗಿರಿ ಹಾಗೂ ಜಾತಿ‌ ನಿಂದನೆಯ ಕೇಸ್ ದಾಖಲಾಗಿದೆ.

ದೊಡ್ಡೇಶ್ ಹಾಗೂ ಲಿಂಗರಾಜ್ ಇಬ್ಬರನ್ನೂ ಕೆಟಿಜೆನಗರ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೈನಮುನಿ ಕೊಲೆ- ಆರೋಪಿಗಳಿಂದ ತಪ್ಪೊಪ್ಪಿಗೆ

ಕಾಂಗ್ರೆಸ್‌ ನೇತೃತ್ವದ ಸರ್ಕಾರವು ನೈತಿಕ ಪೊಲೀಸ್‌ಗಿರಿ ವಿರುದ್ಧ ಕಿಡಿಕಾರಿದೆ. ನೈತಿಕ ಪೊಲೀಸ್‌ಗಿರಿ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶುಕ್ರವಾರ ಬಜೆಟ್‌ ಮಂಡನೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]