ಪೈಪ್‍ನಿಂದ ಲೀಕ್ ಆಗುತ್ತಿದ್ದ ನೀರನ್ನು ಕೋತಿಯೊಂದು ಒಣಎಲೆಯಿಂದ ನಿಲ್ಲಿಸಲು ಪ್ರಯತ್ನಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನಿಹಾರಿಕ ಸಿಂಗ್ ಎಂಬವರು ತಮ್ಮ ಟ್ವಿಟ್ಟರಿನಲ್ಲಿ 14 ಸೆಕೆಂಡ್ ಇರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಪ್ರಾಣಿಗಳಿಗೆ ಇಂತಹ ಬುದ್ಧಿ ಇದೆ ಎಂದರೆ ನಮ್ಮಂತಹ ಮನುಷ್ಯರಿಗೆ ಯಾಕೆ ಇಲ್ಲ ಎಂಬುದು ನನಗೆ ಗೊತ್ತಾಗುತ್ತಿಲ್ಲ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.
https://twitter.com/Niharika_nsp/status/1182211857064480768?ref_src=twsrc%5Etfw%7Ctwcamp%5Etweetembed%7Ctwterm%5E1182211857064480768&ref_url=https%3A%2F%2Fwww.indiatoday.in%2Ftrending-news%2Fstory%2Fmonkey-uses-dry-leaves-to-fix-leaking-pipe-in-viral-video-humans-should-learn-from-animals-says-internet-1608402-2019-10-11
ಈ ವಿಡಿಯೋದಲ್ಲಿ ಪೈಪ್‍ನಿಂದ ನೀರು ಲೀಕ್ ಆಗುತ್ತಿತ್ತು. ಈ ವೇಳೆ ಅಲ್ಲಿಯೇ ಇದ್ದ ಕೋತಿ ಅದನ್ನು ನೋಡಿ ಮರದಿಂದ ಕೆಳಗೆ ಬಿದ್ದಿದ್ದ ಒಣಎಲೆಯಿಂದ ಲೀಕ್ ಆಗುತ್ತಿದ್ದ ನೀರನ್ನು ನಿಲ್ಲಿಸಲು ಪ್ರಯತ್ನಿಸುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋಗೆ ಇದುವರೆಗೂ 3 ಸಾವಿರಕ್ಕೂ ಹೆಚ್ಚು ವ್ಯೂ ಹಾಗೂ 500ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ ಹಲವು ಮಂದಿ ಈ ವಿಡಿಯೋವನ್ನು ಶೇರ್ ಮಾಡಿ ಕಮೆಂಟ್ ಮಾಡುವ ಮೂಲಕ ಕೋತಿ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ಹಸು ಟ್ರಾಫಿಕ್ ರೂಲ್ಸ್ ಪಾಲಿಸುತ್ತಿರುದ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದರು. ಹಸು ಟ್ರಾಫಿಕ್ ಸಿಗ್ನಲ್‍ನಲ್ಲಿ ಬೇರೆ ವಾಹನಗಳ ಜೊತೆ ಅದು ಕೂಡ ನಿಂತಿರುವ ವಿಡಿಯೋ ಹಾಕಿ, “ಜನರ ಬಗ್ಗೆ ಮರೆತು ಬಿಡಿ. ನಮ್ಮ ಪ್ರಾಣಿಗಳು ಸಹ ಟ್ರಾಫಿಕ್ ನಿಯಮವನ್ನು ಪಾಲಿಸುತ್ತದೆ. ನನ್ನ ಮಾತಲ್ಲಿ ನಂಬಿಕೆ ಇಲ್ಲದಿದ್ದರೆ, ಈ ವಿಡಿಯೋ ನೋಡಿ” ಎಂದು ಟ್ವೀಟ್ ಮಾಡಿದ್ದರು.
एसे देख के सीखों ट्रैफ़िक रूल्ज़ कैसे फ़ॉलो करते है 😂 Forget people even our animals obey traffic rules. Don’t believe me – watch this 🤩 #sundayfunday #ting pic.twitter.com/LYCciDpnrp
— Preity G Zinta (@realpreityzinta) October 6, 2019

Leave a Reply