ಬೆಂಗಳೂರು: ಕುಡಿತವನ್ನೇ ಚಟವಾಗಿ ಮಾಡಿಕೊಂಡಿರುವ ಕೋತಿಯೊಂದು ಪ್ರತಿನಿತ್ಯ ನಗರದ ಕಮ್ಮನಹಳ್ಳಿಯ ಬಾರ್ ಗೆ ಬರುತ್ತಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ದಿವಾಕರ್ ಎಂಬವರ ಬಾರಿಗೆ ಕೋತಿ ಬರುತ್ತಿದ್ದು, ಸೋಮವಾರ ಸಂಜೆ ವೇಳೆಯೂ ಬಾರ್ ಗೆ ಬಂದ ಕೋತಿಗೆ ಕೆಲ ಪುಂಡರು ಹೆಂಡ ಕುಡಿಸಿದ್ದಾರೆ. ನಂತರ ಕುಡಿದ ಮತ್ತಿನಲ್ಲಿ ಕೋತಿ ಬಾರ್ ನಲ್ಲಿ ಪುಂಡಾಟ ನಡೆಸಿದೆ.

ಈ ವೇಳೆ ಕೋತಿ ಕಂಡ ಗ್ರಾಹಕರು ಟೇಬಲ್ ಬಿಟ್ಟು ಓಡಿ ಹೋಗಿದ್ದಾರೆ. ಸ್ಥಳೀಯರ ಮೇಲೂ ಕೋತಿ ದಾಳಿ ನಡೆಸಲು ಯತ್ನಿಸಿದೆ. ಇದರಿಂದ ಸ್ಥಳೀಯರು ಪ್ರಾಣಿ ದಯಾ ಸಂಘಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳ್ಕಕೆ ಆಗಮಿಸಿದ ಪ್ರಾಣಿ ದಯಾ ಸಂಘದವರು ರಾತ್ರಿ 2:30 ವರೆಗೂ ಕೋತಿಯನ್ನು ಕಷ್ಟಪಟ್ಟು ಹಿಡಿದು ರಕ್ಷಿಸಿದ್ದಾರೆ. ಕೋತಿಗೆ ಹೆಂಡ ಕುಡಿಸಿದವರ ಮೇಲೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.
https://www.youtube.com/watch?v=P3ANAgU7Hg4





Leave a Reply