ಕೋವ್ಯಾಕ್ಸಿನ್ ಪರೀಕ್ಷೆಗೆ 20 ಕೋತಿ ಹುಡುಕಿದ್ದು ಹೇಗೆ ಗೊತ್ತಾ?

ನವದೆಹಲಿ: ಭಾರತದ ಅಪ್ಪಟ ಸ್ವದೇಶಿ ಕೋವಿಡ್ ಲಸಿಕೆಯಾದ ಕೋವ್ಯಾಕ್ಸಿನ್ ಪರೀಕ್ಷೆಗೆ ಲಾಕ್‍ಡೌನ್ ಸಮಯದಲ್ಲಿ 20 ಮಂಗಗಳನ್ನು ಹಿಡಿದುತಂದಿದ್ದು ಹೇಗೆಂಬ ಕುತೂಹಲಕರ ಸಂಗತಿ ಈಗ ಬೆಳಕಿಗೆ ಬಂದಿದೆ.

ಐಸಿಎಂಆರ್ ನಿರ್ದೇಶಕ ಡಾ. ಬಲರಾಂ ಭಾರ್ಗವ್ ಕೋವ್ಯಾಕ್ಸಿನ್ ಲಸಿಕೆ ಹಿಂದಿನ ಪರಿಶ್ರಮದ ಬಗ್ಗೆ ಗೋಯಿಂಗ್ ವೈರಲ್: ಮೇಕಿಂಗ್ ಆಫ್ ಕೋವ್ಯಾಕ್ಸಿನ್- ದಿ ಇನ್‍ಸೈಡ್ ಸ್ಟೋರಿ ಎಂಬ ಪುಸ್ತಕ ಬರೆದಿದ್ದಾರೆ. ಈ ಪುಸ್ತಕದಲ್ಲಿ ಕೋವ್ಯಾಕ್ಸಿನ್ ಪರೀಕ್ಷೆಯ ಬಗ್ಗೆ ವಿವರಣೆ ನೀಡಲಾಗಿದೆ.  ಇದನ್ನೂ ಓದಿ: ಇಂದಿನಿಂದ ಶಬರಿಮಲೆ ಯಾತ್ರೆ ಆರಂಭ – 2 ಡೋಸ್ ಲಸಿಕೆ ಕಡ್ಡಾಯ

ಮನುಷ್ಯರಿಗೆ ಲಸಿಕೆ ನೀಡುವುದಕ್ಕಿಂತ ಮೊದಲು ಕೋತಿ ಮೇಲೆ ಪ್ರಯೋಗಿಸಲಾಗುತ್ತದೆ. ಇದಕ್ಕೆ ರೋಗನಿರೋಧಕ ಶಕ್ತಿ ಸರಿಯಾಗಿ ಅಭಿವೃದ್ಧಿ ಆಗಿದೆಯೇ ಎಂಬುದನ್ನು ಪರಿಶೀಲಿಸಲು ರೀಸಸ್ ಮಕಾಕ್ ಜಾತಿಯ ಎಳಸು ಮಂಗ ಬೇಕಿದ್ದವು. ಈ ಮಂಗಗಳಿಗಾಗಿ ಹುಡುಕಾಟ ನಡೆಸಲಾಯಿತ್ತು. ಇದನ್ನೂ ಓದಿ: ಅಪ್ಪು ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದ್ಕೊಂಡಿದ್ದೇನೆ: ರಾಘವೇಂದ್ರ ರಾಜ್‍ಕುಮಾರ್

ನಾಗ್ಪುರದಲ್ಲಿ ಸಿಕ್ಕವು: ಮೊದಲು ಈ ಮಂಗಗಳು ಎಲ್ಲೂ ಸಿಗಲಿಲ್ಲ. ನಂತರ ಮಹಾರಾಷ್ಟ್ರದ ನಾಗ್ಫುರದಲ್ಲಿ ಸಿಗುವ ಸುಳಿವು ಸಿಕ್ಕಿತ್ತು. ಲಾಕ್‍ಡೌನ್‍ನಿಂದ ಊರಲ್ಲಿ ಊಟ ಸಿಗದೇ ಕಾಡಿಗೆ ಹೋಗಿದ್ದ 20 ಮಂಗಗಳನ್ನು ಹಿಡಿಯಲಾಯಿತ್ತು. ಅವುಗಳ ಮೇಲೆ ಪರೀಕ್ಷೆ ನಡೆಯಿತು. ಹೀಗಾಗಿ ಯಶಸ್ಸಿನಲ್ಲಿ ಕೋತಿ ಪಾಲೂ ಇದೆ ಎಂದು ಡಾ. ಭಾರ್ಗವ್ ಪುಸ್ತಕದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ನಾಳೆ 3 ಗಂಟೆಗೆ ಅರಮನೆ ಮೈದಾನದಲ್ಲಿ ಪುನೀತ ನಮನ- 1,500 ಮಂದಿಗೆ ಮಾತ್ರ ಅವಕಾಶ

Comments

Leave a Reply

Your email address will not be published. Required fields are marked *