ತುಮಕೂರು: ಗರ್ಭಿಣಿಯೊಬ್ಬರ ಸೀಮಂತದ ಕಾರ್ಯಕ್ರಮದ ವೇಳೆ ತುಂಬು ಗರ್ಭಿಣಿಯಾಗಿದ್ದ ಕೋತಿಗೂ ಸೀಮಂತ ಮಾಡಿದ ಅಚ್ಚರಿಯ ಘಟನೆ ಜಿಲ್ಲೆಯ ಗಂಗೋತ್ರಿ ಬಡಾವಣೆಯಲ್ಲಿ ನಡೆದಿದೆ.
ನಗರದ ಗಂಗೋತ್ರಿ ಬಡಾವಣೆಯ ನಿವಾಸಿ ಅನುಷಾ ಅಶೋಕ್ ಎನ್ನುವವರ ಸೀಮಂತ ಶಾಸ್ತ್ರ ಮಂಗಳವಾರ ನಡೆಯುತ್ತಿತ್ತು. ಇದೇ ವೇಳೆ ತುಂಬು ಗರ್ಭಿಣಿ ಕೋತಿಯೊಂದು ಪದೇ ಪದೇ ಅವರ ಮನೆಯ ಕಿಟಕಿಯಿಂದ ಇಣಕಿ ನೋಡುತಿತ್ತು. ಇದನ್ನು ಗಮನಿಸಿದ ಗರ್ಭಿಣಿ ಕೋತಿಯನ್ನು ಮುದ್ದಾಡಿದ್ದಾರೆ. ಅಲ್ಲದೆ ತಮಗೆ ಸೀಮಂತ ಶಾಸ್ತ್ರ ಮಾಡಿದಂತೆ ಕೋತಿಗೂ ಸೀಮಂತ ಮಾಡಿಸಿದ್ದಾರೆ.

ಕೋತಿಗೂ ಕೂಡ ಹಣ್ಣು, ಸಿಹಿ, ಖಾರ, ಚಕ್ಕುಲಿ, ಹೂವಿನ ಸಿಂಗಾರ ಮಾಡಿ ಸೀಮಂತ ಮಾಡಿದ್ದಾರೆ. ಅನುಷಾ ಅವರು ಆಂಜನೇಯ ಭಕ್ತೆ. ಆದ್ದರಿಂದ ಆಂಜನೇಯ ಚಿತ್ರ ಇರುವ ಬ್ರಾಸ್‍ಲೈಟ್‍ನ್ನು ಸದಾ ಧರಿಸುತ್ತಾರೆ. ಹಾಗಾಗಿ ಮಹಿಳೆ ಸಿಮಂತ ಕಾರ್ಯ ನಡೆಯುವ ವೇಳೆ ಕಾಕತಾಳಿಯ ಎಂಬಂತೆ ಗರ್ಭಿಣಿ ಕೋತಿಗೂ ಸೀಮಂತ ನಡೆದಿದ್ದು ಸ್ಥಳದಲ್ಲಿ ನೆರೆದವರ ಅಚ್ಚರಿ ಹಾಗು ಕುತೂಹಲಕ್ಕೆ ಕಾರಣವಾಗಿತ್ತು.
https://www.youtube.com/watch?v=MfNsXlBW_xk
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply