ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯ ಆಪ್ತ ಸಹಾಯಕ ಎಂದು ಹಣ ಪಡೆದು ವಂಚನೆ – ಪ್ರಕರಣ ದಾಖಲು

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯ ಆಪ್ತ ಸಹಾಯಕ ಎಂದು ಚೆನ್ನೈ ಹಾಗೂ ಊಟಿಯಲ್ಲಿ ಜನರಿಂದ ಹಣ ಪಡೆದು ವಂಚನೆ ಮಾಡ್ತಿರೋದು ಬೆಳಕಿಗೆ ಬಂದಿದೆ.

ಚೆನ್ನೈ, ಊಟಿಯ ಲ್ಯಾಂಡ್ ಲಾರ್ಡ್ರ್ಸ್, ಕೃಷಿಕರು ಹಾಗೂ ಬ್ಯುಸಿನೆಸ್‍ಮೆನ್‍ಗಳಿಗೆ ಕಳೆದ ಮೂರು ತಿಂಗಳಿಂದ ವಂಚನೆ ಮಾಡ್ತಿರೋದು ಗೊತ್ತಾಗಿದೆ. ಪ್ರಕಾಶ್ ಎಂಬಾತ ಶೋಭಾ ಕರಂದ್ಲಾಜೆ ಆಪ್ತ ಅಂತ ಹೇಳಿಕೊಂಡು ಹಣ ಪಡೆದಿದ್ದಾನಂತೆ. ಅಲ್ಲದೇ ಕೇಂದ್ರ ಸರ್ಕಾರದ ಟೆಂಡರ್‌ಗಳನ್ನು ಕೊಡಿಸುವುದಾಗಿ ಭರವಸೆ ಕೂಡ ಕೆಲವರಿಗೆ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: 30 ವರ್ಷದ ಬಳಿಕ ಪಿಯುಸಿ ಪರೀಕ್ಷೆ ಬರೆದು ಪಾಸಾದ ಸಾ.ರಾ ಮಹೇಶ್ ಪತ್ನಿ

ನಿಮ್ಮ ಹೆಸರಲ್ಲಿ ವ್ಯಕ್ತಿಯೊಬ್ಬ ಹಣ ಪಡೆಯುತ್ತಿದ್ದಾನೆ ಅನ್ನೊ ಬಗ್ಗೆ ಸಚಿವರಿಗೆ ವಿಚಾರ ತಿಳಿದು, ಆತನ ಫೋನ್ ನಂಬರ್ ಪರಿಶೀಲನೆ ನಡೆಸಿದಾಗ, ಆತ ಸಚಿವರಿಗೆ ಪರಿಚಯದವನಲ್ಲ ಅನ್ನೋದು ಗೊತ್ತಾಗಿದೆ. ಸಚಿವರ ಆಪ್ತ ಸಹಾಯಕ ವರುಣ್ ಆದಿತ್ಯರಿಂದ ಇದೀಗ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ವಂಚನೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಅಂಗನವಾಡಿ ಶಿಕ್ಷಕಿಯಾಗಿ ದಲಿತೆ ನೇಮಕವಾಗಿದ್ದಕ್ಕೆ ಮಕ್ಕಳನ್ನು ಕಳುಹಿಸದ ಮೇಲ್ಜಾತಿ ಪಾಲಕರು!

Live Tv

Comments

Leave a Reply

Your email address will not be published. Required fields are marked *