ಕೊಪ್ಪಳ: ಧಾರ್ಮಿಕ ಸ್ಥಳಗಳಲ್ಲಿ ಉಚಿತವಾಗಿ ಮೂರು ಹೊತ್ತು ಆಹಾರ ಸಿಗುವುದನ್ನು ನೀವು ಕೇಳಿರಬಹುದು. ಆದರೆ ನಗರದಲ್ಲಿ ಇಸ್ಪೀಟ್ ಅಡ್ಡಕ್ಕೆ ಬರುವವರಿಗೆ ಮಾತ್ರ ಮೂರು ಊಟದ ಜೊತೆಗೆ ಒಂದು ಸಾವಿರ ರೂ. ಆಡುವುದಕ್ಕೆ ಟಿಪ್ಸ್ ಕೊಡ್ತಾರೆ.
ಹೌದು, ಕೊಪ್ಪಳದ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿರುವ ಇಸ್ಪೀಟ್ ಅಡ್ಡದಲ್ಲಿ ಆಡಲು ಬಂದವರಿಗೆ ಉಚಿತವಾಗಿ ಮೂರು ಹೊತ್ತು ಊಟ ಕೊಟ್ಟು ಜೊತೆಗೆ 1 ಸಾವಿರ ರೂ. ಟಿಪ್ಸ್ ಕೂಡ ಕೊಡ್ತಾರೆ. ಇಷ್ಟೆಲ್ಲಾ ಸೌಲಭ್ಯಗಳು ಸಿಗುತ್ತದೆ ಅಂತ ಇಸ್ಪೀಟ್ ಆಡಲು ಇಲ್ಲಿ ಸುತ್ತಮುತ್ತಲಿನ ಜಿಲ್ಲೆಗಳಾದ ಗದಗ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಹುಬ್ಬಳ್ಳಿ ಇನ್ನೂ ಹಲವೆಡೆಯಿಂದ ಜನರು ಬರುತ್ತಾರೆ. ಕಾರಲ್ಲಿ ಬಂದು ಆಟ ಆಡಿ ಹೋಗಲು ಈ ಇಸ್ಪೀಟ್ ಅಡ್ಡದವರು ಖರ್ಚನ್ನು ಕೂಡ ಕೊಡ್ತಾರೆ.

ಇಸ್ಪೀಟ್ ಅಡ್ಡ ಮಾಲೀಕರು ಎನ್ನಿಲ್ಲವೆಂದರೂ ದಿನಕ್ಕೆ 40 ರಿಂದ 50 ಸಾವಿರ ರೂ.ವರೆಗೆ ಖರ್ಚು ಮಾಡ್ತಾರೆ. ಇಷ್ಟು ಖರ್ಚು ಮಾಡುವ ಕ್ಲಬ್ ನಲ್ಲಿ ದಿನಕ್ಕೆ ಎಷ್ಟು ಹಣ ದಿನಕ್ಕೆ ಗಳಿಕೆಯಾಗುತ್ತದೆ ಎನ್ನುವುದನ್ನು ನೀವೇ ಲೆಕ್ಕ ಹಾಕಬೇಕು.
ಈ ರೀತಿಯಾಗಿ ಇಸ್ಪೀಟ್ ಅಡ್ಡಾದ ಹೆಸರನ್ನು ರಿಕ್ರಿಯೆಷನ್ ಅಸೋಷಿಯನ್ ಕ್ಲಬ್ ಮಾಡಲು ಸರ್ಕಾರ ಅನುಮತಿ ನೀಡುತ್ತೆ. ಹಾಗೆಯೇ ಇಂತಹ ಕ್ಲಬ್‍ಗಳಲ್ಲಿ ನೊಂದಣಿಯಾದ ಸದಸ್ಯರು ಬಿಟ್ಟು ಬೇರೆಯವರು ಬರುವಂತಿಲ್ಲ. ಅಲ್ಲದೆ ಇದಕ್ಕೆ ಆಟದ ಮೈದಾನ ಕಡ್ಡಾಯವಾಗಿ ಇರಬೇಕು ಅಷ್ಟೇ ಅಲ್ಲದೇ ಒಳಾಂಗಣ ಕ್ರೀಡಾಂಗಣ ಇರಬೇಕು ಎನ್ನುವ ನಿಯಮವಿದೆ. ಆದರೆ ಈ ಇಸ್ಪೀಟ್ ಕ್ಲಬ್ ನಲ್ಲಿ ಯಾವ ನಿಯಮವನ್ನು ಪಾಲನೆ ಆಗುತ್ತಿಲ್ಲ.

ಈ ಕ್ಲಬ್‍ನಲ್ಲಿ ಇಸ್ಪೀಟ್ ಆಡಲು ಎಂದು ಮಾಡಿಕೊಂಡಿರುವ ಒಂದಿಷ್ಟು ರೂಮ್‍ಗಳು ಬಿಟ್ಟರೆ ಬೇರೇನೂ ಕಾಣಲು ಸಿಗುವುದಿಲ್ಲ. ಈ ಅಕ್ರಮವನ್ನು ತಡೆಯಬೇಕಾದ ಪೊಲೀಸರಿಗೆ ಎಲ್ಲಾ ಮಾಹಿತಿ ಗೊತ್ತಿದ್ದರೂ ಅವರು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply