ಸೆಲ್ಫಿ ಕ್ಲಿಕ್ಕಿಸುತ್ತಲೇ ಸಾವಿನ ಮನೆ ಸೇರಿದ್ರು- ವೈರಲಾಯ್ತು ಯುವಕರ ಕೊನೇ ಕ್ಷಣದ ವಿಡಿಯೋ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ದೋಣಿ ಮಗುಚಿ 8 ಯುವಕರು ದಾರುಣವಾಗಿ ಮೃತಪಟ್ಟಿರೋ ಘಟನೆ ಇಂದು ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ಯುವಕರು ಸೆಲ್ಫಿ ವಿಡಿಯೋ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾಗ್ಪುರದಿಂದ 25 ಕಿ.ಮೀ ದೂರದಲ್ಲಿರೋ ವೇನಾ ಜಲಾಶಯದಲ್ಲಿ ಈ ಅವಘಡ ಸಂಭವಿಸಿದೆ. ಭಾನುವಾರ ಸಂಜೆ 11 ಮಂದಿ ಯುವಕರು ಎಂಜಾಯ್ ಮಾಡಲೆಂದು ವೇನಾ ಜಲಾಶಯಕ್ಕೆ ಬಂದಿದ್ದರು. ಅಂತೆಯೇ ದೋಣಿ ವಿಹಾರ ಮಾಡುತ್ತಾ ತಮ್ಮೊಂದಿಗೆ ಎಂಜಾಯ್ ಮಾಡಲು ಬಾರದ ಸ್ನೇಹಿತನ್ನು ಕಿಚಾಯಿಸುತ್ತಾ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಬಳಿಕ ಅದನ್ನು ಫೇಸ್ ಬುಕ್‍ಗೆ ಅಪ್ ಲೋಡ್ ಮಾಡಿದ್ದಾರೆ. ಹೀಗೆ ಎಂಜಾಯ್ ಮಾಡುತ್ತಿದ್ದ ವೇಳೆಯಲ್ಲಿಯೇ ದೋಣಿ ಮಗುಚಿ ಯುವಕರು ನೀರುಪಾಲಾಗಿದ್ದಾರೆ. ಆದ್ರೆ ಘಟನೆಯಲ್ಲಿ ಮೂವರು ಯುವಕರನ್ನು ರಕ್ಷಿಸಲಾಗಿದೆ.

ಇದಕ್ಕೂ ಮೊದಲು ಮೂವರು ನಾವಿಕರ ಜೊತೆ 8 ವಿದ್ಯಾರ್ಥಿಗಳು ತಮ್ಮನ್ನು ಅಣೆಕಟ್ಟಿನ ಹತ್ತಿರ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು ಎಂಬುವುದಾಗಿ ವರದಿಯಾಗಿದೆ. ದೋಣಿ ಮಗುಚಿ ಬೀಳುವುದನ್ನು ಗಮನಿಸಿದ ಪ್ರತ್ಯಕ್ಷದರ್ಶಿಯೊಬ್ಬರು ಮುಳುಗುತಜ್ಞರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅವರು ಸ್ಥಳಕ್ಕೆ ದೌಡಾಯಿಸಿ ಮೂವರನ್ನು ರಕ್ಷಿಸಿದ್ದಾರೆ ಅಂತ ವರದಿಯಾಗಿದೆ.

ನೀರುಪಾಲಾದ ಯುವಕರಲ್ಲಿ ಓರ್ವನ ಶವ ಪತ್ತೆಯಾಗಿದ್ದು, ಉಳಿದ 7 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಶೋಧ ಕಾರ್ಯಕ್ಕಾಗಿ ಈಗಾಲೇ ಎರಡು ತಂಡಗಳಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಇಂದು ಮುಂಜಾನೆಯೇ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಯುವಕರ ತಂಡವೊಂದು ಪ್ರವಾಸಕ್ಕೆಂದು ವೇನಾ ಜಲಾಶಯಕ್ಕೆ ಬಂದಿದ್ದರು. ಅಂತೆಯೇ ಅವರು ಮೀನುಗಾರಿಕಾ ದೋಣಿಯನ್ನು ಎಂಜಾಯ್ ಮಾಡಲು ಬಳಸಿದ್ದರು. ಹೀಗೆ ಎಂಜಾಯ್ ಮಾಡುತ್ತಿರುವಾಗಲೇ ದೋಣಿ ಮಗುಚಿ ಯುವಕರು ನೀರುಪಾಲಾಗಿದ್ದಾರೆ. ವಿಡಿಯೋದಲ್ಲಿರುವ ವಿದ್ಯಾರ್ಥಿಗಳೆಲ್ಲರೂ 20ರಿಂದ 25 ವರ್ಷದೊಳಗಿನವರಾಗೆ ಕಾಣುತ್ತಾರೆ ಅಂತ ಪೊಲೀಸ್ ಅಧಿಕಾರಿ ಸುರೇಶ್ ಭಯೋತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

https://www.youtube.com/watch?v=FcyW-PXLGK4

Comments

Leave a Reply

Your email address will not be published. Required fields are marked *