ಯಾದಗಿರಿ: ಒಂದು ಕಡೆ ಕೊರೊನಾ ಮೂರನೇ ಅಲೆಯ ಭೀತಿ, ಮತ್ತೊಂದು ಕಡೆ ಹಬ್ಬದ ನಿಷೇಧದ ನಡುವೆಯೂ ಮೊಹರಂ ನಂತರ ಬರುವ ಅದರ ಮುಂದುವರಿದ ಪೀರದೇವರು ಹಬ್ಬದ ಆಚರಣೆ ಯಾದಗಿರಿಯಲ್ಲಿ ಜೋರಾಗಿದ್ದು, ದೇವರ ದರ್ಶನ ಪಡೆಯಲು ಜನ ಮುಗಿಬಿದ್ದಾರೆ.

ಕೇರಳದಲ್ಲಿ ಇತ್ತೀಚೆಗೆ ಓಣಂ ಹಬ್ಬ ಮಾಡಿದ ನಂತರ ಅಲ್ಲಿನ ಕೊರೊನಾ ಪರಿಸ್ಥಿತಿ ಕೈಮೀರಿ ಹೋಗಿದೆ. ಆ ಪರಿಸ್ಥಿತಿ ನಮಗೂ ಬರಬಾರದೆಂದು ಜಿಲ್ಲಾಡಳಿತಗಳು ಶಿಸ್ತುಬದ್ಧ ನಿಯಮಗಳನ್ನು ಹಬ್ಬಗಳ ಮೇಲೆ ಹೇರಿದೆ. ಅವುಗಳಿಗೆ ಯಾದಗಿರಿ ಜನರು ಕವಡೆ ಕಾಸಿನ ಕಿಮ್ಮತ್ತು ನೀಡದೆ ಕೊರೊನಾಗೆ ಲೆಕ್ಕಿಸದೇ ಜಿಲ್ಲೆಯಾದ್ಯಂತ ಮೊಹರಂ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ.ಇದನ್ನೂ ಓದಿ:ಕೊಡಲಿಯಿಂದ ತಲೆಗೆ ಹೊಡೆದು ಯುವಕನ ಕೊಲೆ
ಯಾದಗಿರಿ ತಾಲೂಕಿನ ಕಡೇಚೂರು ಗ್ರಾಮದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಜನ ಪೀರದೇವರ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಹಬ್ಬಗಳಿಗೆ ನಿಷೇಧ ಏರಿದ್ದರೂ ಜಿಲ್ಲಾಡಳಿತದ ಆದೇಶಕ್ಕೆ ಮಾತ್ರ ಜನ ಬೆಲೆ ನೀಡುತ್ತಿಲ್ಲ.ಇದನ್ನೂ ಓದಿ:ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ

ಇನ್ನೂ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಈ ಗ್ರಾಮ ಬರುತ್ತದೆ. ಆದರೆ ಪೊಲೀಸರು ಮಾತ್ರ ನಮಗೂ ಇದ್ದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತನೆ ತೋರುತ್ತಿದ್ದಾರೆ.

Leave a Reply