– ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
– ಅಜ್ಜಿಯ ವೀಡಿಯೋ ನೋಡಿ ನೆಟ್ಟಿಗರೂ ಕಣ್ಣೀರು
ಹೈದರಾಬಾದ್: ವೃದ್ಧೆ ಅಭಿಮಾನಿಯೊಬ್ಬರ ಆಸೆಯನ್ನು ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಈಡೇರಿಸಿದ್ದಾರೆ. ಈ ಮೂಲಕ ಅಭಿಮಾನಿಯ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ.

ರುಕ್ಮಿಣಿ ಮಾಮಿಯವರು ಮೋಹನ್ ಲಾಲ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರನ್ನು ನೋಡುವ ಬಯಕೆಯನ್ನು ವೀಡಿಯೋ ಮೂಲಕ ಹೊರಹಾಕಿದ್ದರು. ಈ ಅಜ್ಜಿಯ ವೀಡಿಯೋವನ್ನು ಅಭಿಮಾನಿಗಳು ನಟನಿಗೆ ತಲುಪಿಸಿದ್ದಾರೆ. ಈ ಹೃದಯ ಸ್ಪರ್ಶಿ ವೀಡಿಯೋ ನೋಡಿದ ನಟ ಮೋಹನ್ ಲಾಲ್, ರುಕ್ಮಿಣಿ ಮಾಮಿಯವರಿಗೆ ವೀಡಿಯೋ ಕಾಲ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾ ಬ್ರ್ಯಾಂಡ್‍ನ ಜೆರ್ಸಿ ನೀರಿನ ಬಾಟಲಿ ಮಾರುಕಟ್ಟೆಗೆ
https://twitter.com/MohanlalMFC/status/1439976831768150016
ರುಕ್ಮಿಣಿ ಮಾಮಿ ಮೂಲತಃ ಕೇರಳ ತ್ರಿಶೂರಿನ ಪುಂಕನ್ನಂಲ್ಲಿರುವ ಅನಾಥಾಶ್ರಮದಲ್ಲಿ ನೆಲೆಸಿದ್ದಾರೆ. ದೇವಸ್ಥಾನದ ಅರ್ಚಕರಾಗಿದ್ದ ಆಕೆಯ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು. ಸದಾ ಮೋಹನ್ ಲಾಲ್ ಬಗ್ಗೆ ಮಾತನಾಡುತ್ತಿದ್ದ ಆಕೆಯನ್ನು ಜೊತೆಗಿದ್ದವರು ಚುಡಾಯಿಸುತ್ತಿದ್ದರು. ಇದರ ಬಗ್ಗೆ ಅಳಲು ತೋಡಿಕೊಂಡಿರುವ ರುಕ್ಮಿಣಿ ಮಾಮಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ಐಪಿಎಲ್‍ನಲ್ಲಿ ವಾರ್ನರ್ ದಾಖಲೆ ಹಿಂದಿಕ್ಕಿದ ಕನ್ನಡಿಗ ಕೆ.ಎಲ್ ರಾಹುಲ್

ಇದನ್ನು ಅರಿತ ನಟ ಮೋಹನ್ ಲಾಲ್, ಅಜ್ಜಿಯ ಜೊತೆ ವೀಡಿಯೋ ಕಾಲ್‍ನಲ್ಲಿ ಮಾತನಾಡಿ ಸಂತಸ ಮೂಡಿಸಿದ್ದಾರೆ. ಅಲ್ಲದೆ ಕೋವಿಡ್ ಕಡಿಮೆಯಾದ ನಂತರ ಅಜ್ಜಿಯನ್ನು ಭೇಟಿಯಾಗುವ ಭರವಸೆಯನ್ನು ಕೂಡ ನೀಡಿದ್ದಾರೆ. ಸದ್ಯ ಹೈದರಾಬಾದ್‍ನಲ್ಲಿ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ನಟ ಮೋಹನ್ ಲಾಲ್, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Leave a Reply