ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

– ಅಸ್ಪೃಶ್ಯತೆಯಂತಹ ನೀಚ ಪದ್ಧತಿಗಳನ್ನು ತೊಲಗಬೇಕು
– ಧರ್ಮದ ಮೌಲ್ಯಗಳನ್ನು ತಿಳಿದುಕೊಳ್ಳಿ

ನವದೆಹಲಿ:ಮದುವೆಯಾಗಲೆಂದೇ ಮತಾಂತರಗೊಳ್ಳುವುದು ತಪ್ಪು ಎಂದು (RSS)ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಇಗಾಗಲೇ ಮತಾಂತರದ ಸುದ್ದಿ ಕುರಿತಾಗಿ ಎಲ್ಲ ಪಕ್ಷದ ನಾಯಕರು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದೀಗ ಈ ಕುರಿತಾಗಿ ಮೋಹನ್ ಭಾಗವತ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹುಡುಗ, ಹುಡುಗಿಯರು ಮದುವೆಯಾಗಲೆಂದೇ ಇತರ ಧರ್ಮಗಳಿಗೆ ಮತಾಂತರಗೊಳ್ಳುವುದು ತಪ್ಪಾಗಿದೆ. ಹಿಂದೂ ಧರ್ಮದ ಪರಂಪರೆ ಮತ್ತು ಉದಾತ್ತತೆಯನ್ನು ಬಾಲ್ಯದಿಂದಲೇ ತಾಯಂದಿರು ಮಕ್ಕಳಿಗೆ ಕಲಿಸುತ್ತಿಲ್ಲ. ಹೀಗಾಗಿ ಮತಾಂತರ ನಡೆಯುತ್ತಿದೆ ಎಂದು ಮತಾಂತರ ಕುರಿತಾಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ಯಾಂಟ್ ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್- ಸಿಸಿಬಿ ಬಲೆಗೆ ಬಿದ್ದ ಆರೋಪಿ

ಹಿಂದೂ ಹುಡುಗಿಯರು ಮತ್ತು ಹುಡುಗರು ಇತರ ಧರ್ಮವನ್ನು ಏಕೆ ಸ್ವೀಕರಿಸುತ್ತಾರೆ? ಮದುವೆಯೆಂಬ ಅವರ ವೈಯಕ್ತಿಕ ಸ್ವಾರ್ಥಕ್ಕಾಗಿ ಆಗಿದೆ. ನಾವು ಮಕ್ಕಳಿಗೆ ಮನೆಯಲ್ಲಿ ನಮ್ಮ ಧರ್ಮದ ಮೌಲ್ಯಗಳನ್ನು ಕಲಿಸಬೇಕು. ನಮ್ಮ ಸ್ವಭಾವ, ನಮ್ಮ ಧರ್ಮ ಮತ್ತು ನಮ್ಮ ಪ್ರಾರ್ಥನೆ, ಸಂಪ್ರದಾಯಗಗಳ ಕುರಿತಾಗಿ ಗೌರವವನ್ನು ಬೆಳೆಸಬೇಕಿದೆ. ಒಟಿಟಿ (OTT) ಪ್ಲಾಟ್‍ಫಾರ್ಮ್‍ಗಳು ಮಕ್ಕಳಿಗೆ ಎಲ್ಲ ರೀತಿಯ ವಿಷಯಗಳನ್ನು ತೋರಿಸುತ್ತದೆ. ನಾವು ನಮ್ಮ ಮಕ್ಕಳಿಗೆ ಮನೆಯಲ್ಲಿ ಏನು ನೋಡಬೇಕು, ನೋಡಬಾರದು ಎಂಬುದನ್ನು ತಿಳಿಸಿ ಹೇಳಬೇಕು. ಹಿಂದು ಸಮಾಜವನ್ನು ಸಂಘಟಿಸುವುದು  RSS ಗುರಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರ್ತಾರಾ ಬಾಬುರಾವ್ ಚಿಂಚನಸೂರ್..?

ಭಾಷೆ, ಆಹಾರ, ಭಕ್ತಿಗೀತೆಗಳು, ಪ್ರಯಾಣ, ಉಡುಗೆ ಮತ್ತು ಮನೆ ಸೇರಿದಂತೆ ಭಾರತೀಯ ಸಂಸ್ಕೃತಿಯ ಬೇರುಗಳೊಂದಿಗೆ ಸಂಪರ್ಕದಲ್ಲಿರಲು ಆರು ಮಂತ್ರಗಳು ಆಗಿವೆ. ಅಸ್ಪೃಶ್ಯತೆಯಂತಹ ನೀಚ ಪದ್ಧತಿ ತೊಲಗಬೇಕು ಎಂದು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *