ಅಂಬಿ ಚಿತೆಗೆ ಕಟ್ಟಿಗೆ ಹಾಕುವಾಗ ಬಿಕ್ಕಿ ಬಿಕ್ಕಿ ಅತ್ತ ಆಪ್ತ

ಬೆಂಗಳೂರು: ನಟ ಅಂಬರೀಶ್ ಚಿತೆಗೆ ಸಕಲ ಸಿದ್ಧತೆಯನ್ನು ನಗರದ ಕಂಠೀರವ ಸ್ಟೂಡಿಯೋದಲ್ಲಿ ಮಾಡಲಾಗಿತ್ತು. ಈ ವೇಳೆ ಅಂಬಿಯ ಆಪ್ತ ಗೆಳೆಯ ನಟ ಮೋಹನ್ ಬಾಬು ಅವರು ಅವರ ಚಿತೆಗೆ ಕಟ್ಟಿಗೆ ಹಾಕುವಾಗ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ನಗರದ ಕಂಠೀರವ ಸ್ಟುಡಿಯೋದಲ್ಲಿ ಅಂಬಿಯ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡುತ್ತಿದ್ದರು. ಈ ವೇಳೆ ಗಣ್ಯರು ಬಂದು ಅಂಬರೀಶ್ ಅವರಿಗೆ ಕಟ್ಟಿಗೆ ಹಾಕುವ ಮೂಲಕ ಅಂತಿಮ ನಮನ ಸಲ್ಲಿಸುತ್ತಿದ್ದರು. ಆಗ ಮೋಹನ್ ಬಾಬು ಅವರು ತಮ್ಮ ಮಗ ಮತ್ತು ಮಗಳ ಜೊತೆ ಬಂದಿದ್ದು, ಅಂಬರೀಶ್ ಅವರಿಗೆ ಸಿದ್ಧಮಾಡಿದ್ದ ಚಿತೆಯ ಬಳಿ ಹೋಗಿದ್ದಾರೆ. ಬಳಿಕ ಕಟ್ಟಿಗೆಯನ್ನು ಕೈಯಲ್ಲಿ ಕೊಟ್ಟ ತಕ್ಷಣ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಳಿಕ ಅವರು ಕುಟುಂಬದವರು ಒಟ್ಟಿಗೆ ಸೇರಿ ಚಿತೆಗೆ ಕಟ್ಟಿಗೆಯನ್ನು ಹಾಕಿದ್ದಾರೆ. ಕೊನೆಗೆ ಕಟ್ಟಿಗೆ ಹಾಕಿ ಕೈ ಮುಗಿದು ಅತ್ತಿದ್ದಾರೆ.

ನಟ ಅಂಬರೀಶ್ ಅನಾರೋಗ್ಯದ ಕಾರಣ ಶನಿವಾರ ರಾತ್ರಿ ವಿಧಿವಶರಾಗಿದ್ದರು. ಭಾನುವಾರ ಬೆಳಗ್ಗೆ ಗಣ್ಯರಿಗೆ ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಂದು ಸಿನಿಮಾರಂಗ ಗೆಳೆಯನಾಗಿದ್ದ ಮೋಹನ್ ಬಾಬು ಅವರು ಸುದ್ದಿ ತಿಳಿದು ಬಂದು ಅಂಬಿಯ ಅಂತಿಮ ದರ್ಶನ ಪಡೆದಿದ್ದರು. ಭಾನುವಾರ ಸಹ ಅಂಬರೀಶ್ ನೋಡಿ ಅವರ ಪಾರ್ಥಿವ ಶರೀರವನ್ನು ಅಪ್ಪಿಕೊಂಡು ಗಳಗಳನೇ ಅತ್ತಿದ್ದರು.

ನಟ ಚಿರಂಜೀವಿ, ರಜಿನಿಕಾಂತ್, ಸುದೀಪ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಯಶ್ ಸೇರಿದಂತೆ ಇಡೀ ಚಿತ್ರರಂಗವೇ ಅಂಬರೀಶ್ ಅಗಲಿಕೆಯಿಂದ ಕಣ್ಣೀರು ಹಾಕುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *