ನನಗೂ ಈ ಗಲಾಟೆಗೂ ಯಾವುದೇ ಸಂಬಂಧ ಇಲ್ಲ, ನನ್ನ ವಿರುದ್ಧ ತನಿಖೆ ಆಗಲಿ: ನಲಪಾಡ್

ಬೆಂಗಳೂರು: ನನಗೂ ಈ ಗಲಾಟೆಗೂ ಯಾವುದೇ ಸಂಬಂಧ ಇಲ್ಲ. ಬೇಕಾದರೆ ನನ್ನ ವಿರುದ್ಧ ತನಿಖೆ ಆಗಲಿ ಎಂದು ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.

ಬುಧವಾರ ಮಧ್ಯಾಹ್ನ ಊಟ ಆಯೋಜನೆ ಮಾಡಿದ್ದು ನಾನು. ಸಂಜೆ ನನ್ನ ಮಿತ್ರರು ಪಾರ್ಟಿ ಮಾಡಿದ್ದರು. ಸಂಜೆ ಪಾರ್ಟಿಗೂ ನನಗೂ ಸಂಬಂಧ ಇಲ್ಲ. ನನಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ನಮ್ಮ ಪಕ್ಷದವರೇ ಹೀಗೆ ಮಾಡುತ್ತಿದ್ದಾರೆ. ನನ್ನ ವಿರುದ್ಧ ಯಾರೂ ಬೇಕಾದರೂ ತನಿಖೆ ಮಾಡಲಿ. ನನಗೆ ಫೆಬ್ರವರಿ 1ರಿಂದ ಕಾಂಗ್ರೆಸ್ ಯುವಮೋರ್ಚಾ ಅಧ್ಯಕ್ಷನಾಗಿ ಪಾದಾರ್ಪಾಣೆ ಮಾಡಲು ಈಗಾಗಲೇ ಆದೇಶ ನೀಡಲಾಗಿದೆ. ಇದು ನನ್ನ ಕೈ ತಪ್ಪಲಿದೆ ಎನ್ನುವುದನ್ನು ಬಿಟ್ಟುಬಿಡಿ ಎಂದು ಹೇಳಿದರು. ಇದನ್ನೂ ಓದಿ:  ಜನರಿಗೆ ತೊಂದ್ರೆ ಕೊಡೋದ್ರಿಂದ ಸರ್ಕಾರಕ್ಕೆ ಲಾಭವೂ, ಇಲ್ಲ ನಷ್ಟವೂ ಇಲ್ಲ: ಸುಧಾಕರ್

ಈ ಘಟನೆ ಕುರಿತಂತೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಆಗಿ ವಿವರಣೆ ಕೊಡುತ್ತೇನೆ. ಇದು ಆಫಿಶಿಯಲ್ ಸಭೆ ಅಲ್ಲ. ಇದೊಂದು ಪರ್ಸನಲ್ ಮೀಟಿಂಗ್ ಅಷ್ಟೇ. ಮಂಜುನಾಥ್ ಗೌಡರೇನೂ ಪಾಕಿಸ್ತಾನದಿಂದ ಬಂದವರಾ? ಅವರೇನೂ ಬಿಜೆಪಿ, ಜೆಡಿಎಸ್ ಅವರಾ? ಅವರು ನಾವು ಸ್ನೇಹಿತರೇ. ನಾನು ಬೇಬಿ ಸ್ಟೆಪ್ ಇಡುತ್ತಿರುವವನು. ಷಡ್ಯಂತ್ರ ಮಾಡುತ್ತಿದ್ದಾರೆ. ಆದರೆ ಯಾವ ಲೆವೆಲ್‍ನಲ್ಲಿ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು.

ಈ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ಘಟನೆ ಆಗಿದ್ದು ನಿಜನಾ? ಗಲಾಟೆಯಲ್ಲಿ ಯಾರ್‍ಯಾರಿದ್ದಾರೆ. ಈ ಬಗ್ಗೆ ಕುದ್ದು ಪೊಲೀಸ್ ಅಧಿಕಾರಿಗಳಿಂದಲೇ ಕಲೆ ಹಾಕಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಈ ಬಾರಿಯ ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿಗಳಿಗೆ ಆಹ್ವಾನ ಇಲ್ಲ

ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಅವರು ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಆ್ಯಂಡ್ ಟೀಂ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಬುಧವಾರ ನಲಪಾಡ್ ಖಾಸಗಿ ಹೋಟೆಲ್ ನಲ್ಲಿ ಮಧ್ಯಾಹ್ನ ಗೆಟ್ ಟೂ ಗೆದರ್ ರೀತಿಯಲ್ಲಿ ಪೂರ್ವಭಾವಿ ಸಭೆ ಕರೆದಿದ್ದರು. ಆ ಕ್ಷಣದಲ್ಲಿ ನಾನು ಮುಂದಿನ ಅಧ್ಯಕ್ಷನಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತೇನೆ ಎಂದು ಪ್ರಸ್ತಾಪಿಸಿದರು. ನಂತರ ರಾತ್ರಿ ಯಲಹಂಕದ ಒಂದು ಕ್ಲಬ್‍ನಲ್ಲಿ ಭೋಜನಕ್ಕೆ ಕರೆದಿದ್ದರು. ಈ ವೇಳೆ ನನ್ನನ್ನು ಹಾಗೂ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ್ ಗೌಡರವರನ್ನು ಸದಸ್ಯ ಎಂದು ತಿಳಿದು ಸಮಯ ನೋಡಿ, ಏನು ಲೇ ನೀವು ಮಂಜುಗೌಡಗೆ ಸಪೋರ್ಟ್ ಮಾಡುತ್ತೀರಾ ಎಂದು ಹಲ್ಲೆ ನಡೆಸಿರುವುದಾಗಿ ದೂರಿದ್ದರು.

ನಂತರ ಅವರ ಸ್ನೇಹಿತನ ಮೇಲೆ ಹಾಗೂ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಅಲ್ಲಿಂದ ಸಿದ್ದು ಹಳ್ಳೇಗೌಡ ಮತ್ತು ಮಂಜುಗೌಡ ಅವರು ವಾಹನವನ್ನು ಹಿಂಬಾಲಿಸಿ ಬಂದು ಅವರೆಲ್ಲರನ್ನು ಪ್ರಾಣಾಪಾಯದಿಂದ ಪಾರುಮಾಡಿ ಆ ಸ್ಥಳದಿಂದ ತಪ್ಪಿಸಿ ಕರೆದೊಯ್ದಿದೆ. ನಲಪಾಡ್ ಸ್ನೇಹಿತರಿಂದ ಮತ್ತು ಕುಟುಂಬ ಸದಸ್ಯರಿಂದ ನನಗೆ ಜೀವ ಬೆದರಿಕೆ ಇದೆ ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *