2019ರ ಬಳಿಕ ಮೋದಿ ನಿರುದ್ಯೋಗಿ, ಆ ನಂತ್ರ ಕರ್ನಾಟಕಕ್ಕೆ ಬಂದು ಕನ್ನಡ ಕಲಿಯಲಿ- ಪ್ರಕಾಶ್ ರೈ ತಿರುಗೇಟು

ಮಂಗಳೂರು: ಕನ್ನಡ ಕಲಿತೀನಿ ಎಂದಿದ್ದ ಪ್ರಧಾನಿ ಮೋದಿ ಅವರಿಗೆ ಬಹುಭಾಷಾ ನಟ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.

2019ರ ಬಳಿಕ ಮೋದಿ ನಿರುದ್ಯೋಗಿ ಆಗುತ್ತಾರೆ. ಆ ನಂತರ ಅವರು ಕರ್ನಾಟಕಕ್ಕೆ ಬಂದು ಕನ್ನಡ ಕಲಿಯಲಿ. ಆದರೆ ವಯಸ್ಕರ ಶಿಕ್ಷಣ ಕೇಂದ್ರಕ್ಕೆ ಸೇರಬೇಕು. ಶಾಲಾ ಮಕ್ಕಳ ಜೊತೆಗೆ ನಿಮ್ಮ ಸ್ಥಾನ ಇಲ್ಲ. ನಿಮಗೆ ತೀಟೆ ತೀರಿಸೋಕೆ ಕರ್ನಾಟಕ ಬೇಕು. ಪ್ರಧಾನಿ ಮೋದಿಗೆ ಮತಿಭ್ರಮಣೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ರೈ ಹೇಳಿಕೆ ನೀಡಿದ್ದಾರೆ.

ಬಂಟ್ವಾಳದಲ್ಲಿ ಸಂವಿಧಾನ ಉಳಿವಿಗೆ ಸ್ವಾಭಿಮಾನಿ ಸಮಾವೇಶ ನಡೆಯುತ್ತಿದ್ದು, ಯಾವನೋ ನೆಹರು, ಟಿಪ್ಪು ಹಿಂದೆ ಏನೋ ಮಾಡಿ ಹೋಗಿದ್ದರೆ ಅದರ ವಿಚಾರ ನಮಗೇಕೆ. ದೇಶದ ಜನತೆಗೆ ಅಭಿವೃದ್ಧಿ ವಿಚಾರದ ಬಗ್ಗೆ ಹೇಳಿ ಸುಳ್ಳನ್ನೇ ಹೇಳುವ ಜಾಯಾಮಾನದವರು ಬಿಜೆಪಿಯವರು ಎಂದು ವಗ್ದಾಳಿ ನಡೆಸಿದ್ರು.

ಬಿಜೆಪಿ ಮಾತ್ರ ಬೆದರು ಗೊಂಬೆಗಳ ತರ ಇದೆ. ಪಕ್ಷಕ್ಕೆ ಸಿದ್ಧಾಂತ ಎಂಬುದೇ ಇಲ್ಲ. ಆರ್‌ಎಸ್‌ಎಸ್ ಹೇಳಿದಂತೆ ಕೇಳುವ ಪಕ್ಷ ಬಿಜೆಪಿ ಅವರದ್ದು ಎಂದು ಅವರು ಟೀಕಿಸಿದ್ದಾರೆ.

ಇತ್ತೀಚೆಗೆ ಪಕ್ಷದ ರಾಜ್ಯ ನಾಯಕರೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ವೇಳೆ ಮೋದಿಯವರು ನನಗೆ ಕನ್ನಡ ಇಷ್ಟ ಅಂತ ಹೇಳಿದ್ದರು.

Comments

Leave a Reply

Your email address will not be published. Required fields are marked *