ಕಲಬುರಗಿ: ನಾಟಕ ಮಾಡುವುದರಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರಿಗಿಂತ ಪ್ರಧಾನಿ ನರೇಂದ್ರ ಮೋದಿ ದೊಡ್ಡ ನಾಟಕಗಾರ ಎಂದು ಚಿಂಚೋಳಿಯ ಐನೊಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಚಿಂಚೋಳಿಯ ಐನೊಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುತ್ತ ಸಿದ್ದರಾಮಯ್ಯ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಸುಳ್ಳು ಹೇಳುವುದರಲ್ಲಿ, ನಾಟಕ ಮಾಡುವುದರಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರನ್ನು ಮೋದಿ ಮೀರಿಸುತ್ತಾರೆ. ಮೋದಿ ಹೇಳುವುದೆಲ್ಲಾ ಬಂಡಲ್, ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಣ ಜಮೆ ಮಾಡುತ್ತೇನೆ. ವಿದೇಶದಲ್ಲಿರುವ ಕಪ್ಪು ಹಣ ವಾಪಾಸ್ ತರುತ್ತೇನೆ ಎಂದು ಮೋದಿ ಹೇಳಿದ್ದರು. ಐದು ವರ್ಷದಲ್ಲಿ ಒಂದೇ ಒಂದು ರೂಪಾಯಿ ಕೂಡ ಕೊಟ್ಟಿಲ್ಲವಲ್ಲ, ಮೋದಿ ಮನೆ ಹಾಳಾಗ ಎಂದು ಕಿಡಿಕಾರಿದರು.

ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ಸಿಕ್ಕಿದ್ದರೆ ಅದು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಮಾತ್ರ. ಅಂಬೇಡ್ಕರ್ ಪ್ರತಿಮೆಗಳನ್ನ ಧ್ವಂಸ ಮಾಡಬೇಕು, ಸಂವಿಧಾನವನ್ನು ಸುಟ್ಟು ಹಾಕಬೇಕು ಎಂದು ತೇಜಸ್ವಿ ಸೂರ್ಯ ಹೇಳುತ್ತಾನೆ. ಅದಕ್ಕೆ ಅವನಿಗೆ ತೇಜಸ್ವಿ ಸೂರ್ಯ ಅಂತ ಕರೆಯಬಾರದು ಅಮವಾಸೆ ಸೂರ್ಯ ಅಂತ ಕರೆಯಬೇಕು ಎಂದು ಮತ್ತೊಮ್ಮೆ ಬಿಜೆಪಿ ಯುವ ಮೋರ್ಚಾದ ನಾಯಕ ತೇಜಸ್ವಿ ಸೂರ್ಯ ಅವರನ್ನು ಲೇವಡಿ ಮಾಡಿದರು.


Leave a Reply