PM KISAN ಕಿಸಾನ್‌ 12ನೇ ಕಂತಿನ ಹಣ ಬಿಡುಗಡೆ – ಕರ್ನಾಟಕದ 53 ಲಕ್ಷ ರೈತರಿಗೆ ಬಂಪರ್‌ ಕೊಡುಗೆ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ಪ್ರಧಾನ ಮಂತ್ರಿ ಕಿಸಾನ್ (PM KISAN) ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ನೆರವನ್ನು ಬಿಡುಗಡೆ ಮಾಡಿದ್ದು, ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರೂ. ಗಳನ್ನು ವರ್ಗಾವಣೆ ಮಾಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ (DC) ವರ್ಚುವಲ್ ಆಗಿ ಈ ಸಮಾರಂಭದಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ದೀಪಾವಳಿಗೆ ಸಿಹಿ ಸುದ್ದಿ- ರೈತರ ಖಾತೆಗೆ 2 ಸಾವಿರ ಹಣ ಬಿಡುಗಡೆ ಮಾಡಿದ ಪ್ರಧಾನಿ

ಈ ಯೋಜನೆಯ ಪ್ರಮುಖ ಅಂಶಗಳು: ಇಲ್ಲಿಯವರೆಗೆ, ಕೇಂದ್ರ ಸರ್ಕಾರದಿಂದ (Central Government) 53.83 ಲಕ್ಷ ರೈತ (Farmers) ಕುಟುಂಬಗಳು ಕನಿಷ್ಠ ಒಂದು ಕಂತು ಪಡೆಯುವ ಮೂಲಕ ಯೋಜನೆಯ ಲಾಭ ಪಡೆದಿದ್ದಾರೆ. ಮಾರ್ಚ್ 2019 ರಿಂದ ಜುಲೈ 2022 ರವರೆಗೆ 53.83 ಲಕ್ಷ ರೈತ ಕುಟುಂಬಗಳು ಭಾರತ ಸರ್ಕಾರದಿಂದ ಒಟ್ಟು 9.968.57 ಕೋಟಿ ಆರ್ಥಿಕ ಸಹಾಯಧನ ಪಡೆದುಕೊಂಡಿವೆ. ಆದರೆ 2022-23 ನೇ ಸಾಲಿನಲ್ಲಿ 1,251.98 ಕೋಟಿಗಳ ಆರ್ಥಿಕ ಸಹಾಯಧನ ವರ್ಗಾವಣೆಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ನ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ, ನನಗೆ ಗೆಲ್ಲುವ ಭರವಸೆ ಇದೆ: ಶಶಿ ತರೂರ್

ರಾಜ್ಯ ಸರ್ಕಾರದಿಂದ (Government Of Karnataka) ಪಿಎಂ ಕಿಸಾನ್ – ಕರ್ನಾಟಕ ಯೋಜನೆಯಡಿ ಭಾರತ ಸರ್ಕಾರದಿಂದ ಅನುಮೋದಿಸಲ್ಪಟ್ಟ ರೈತ ಕುಟುಂಬಗಳಿಗೆ (Farmers Family) 2019 ರಿಂದ ಇಲ್ಲಿವರೆಗೆ 4,821.37 ರೂ. ಹಾಗೂ 2022-23ನೇ ಸಾಲಿನಲ್ಲಿ 956.71 ಕೋಟಿಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ.

ಈ ಯೋಜನೆಯಡಿ ಎಲ್ಲಾ ಪಾವತಿಗಳನ್ನು ಸಾಧ್ಯವಾದಷ್ಟು ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಮಾಡಬೇಕೆಂದು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಎಲ್ಲಾ ರಾಜ್ಯಗಳ ಪೈಕಿ, ಕರ್ನಾಟಕ ಅತಿ ಹೆಚ್ಚು ಶೇಕಡಾವಾರು (ಶೇ.96) ಆಧಾರ್ ಆಧಾರಿತ ವಹಿವಾಟು ನಿರ್ವಹಿಸಿದ ಹಿನ್ನೆಲೆಯಲ್ಲಿ 2020-21 ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ಸಹ ದೊರೆತಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *