ಸಮುದ್ರದಲ್ಲಿ ಮುಳುಗಿ 19 ವರ್ಷದ ಮಾಡೆಲ್ ಸಾವು

ಕೇಪ್‍ಟೌನ್: 19 ವರ್ಷದ ಬ್ರಿಟಿಷ್ ಮಾಡೆಲ್ ಒಬ್ಬಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

ಸಿನೀಡ್ ಮೂಡ್ಲಿಯರ್(19) ಮೃತಪಟ್ಟ ಮಾಡೆಲ್. ಸಿನೀಡ್ ಖ್ವಾಜುಲು ನಟಲ್‍ನ ಉಮ್ಲಾಹನಗರದ ರೆಸಾರ್ಟ್‍ನಲ್ಲಿ ತನ್ನ ರಜೆ ದಿನಗಳನ್ನು ಕಳೆಯುತ್ತಿದ್ದಾಗ ಈ ಘಟನೆ ನಡೆದಿದೆ. ಸಿನೀಡ್ ಮೂಲತಃ ಲಂಡನ್‍ನವಳಾಗಿದ್ದು, ಲಂಡನ್ ಮಾಡೆಲಿಂಗ್ ಏಜೆನ್ಸಿಗಾಗಿ ಕೆಲಸ ಮಾಡುತ್ತಿದ್ದಳು.

ಸಿನೀಡ್ ಮುಳುಗುವ ವೇಳೆ ಕೂಡಲೇ ಧಾವಿಸಿದ ಜೀವರಕ್ಷಕ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದಾರೆ. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾಳೆ ಎಂದು ಸಿನೀಡ್ ತಂದೆ ಬಾಬ್ ಮೂಡ್ಲಿಯರ್ ತಿಳಿಸಿದ್ದಾರೆ.

ಸಿನೀಡ್ ತನ್ನ ಸ್ನೇಹಿತರ ಜೊತೆ ಸಮುದ್ರದ ಬಳಿ ನಿಂತು ಸೂರ್ಯೋದಯವನ್ನು ವೀಕ್ಷಿಸುತ್ತಿದ್ದಳು. ಆಗ ಅಲ್ಲಿ ಬೀಸಿದ ಭಾರೀ ಅಲೆಗೆ ಆಕೆ ಸಮುದ್ರದಲ್ಲಿ ಬಿದ್ದಿದ್ದಾಳೆ. ಸಮುದ್ರಕ್ಕೆ ಬೀಳುವ ವೇಳೆ ಬಂಡೆಗೆ ತಲೆ ಬಡಿದು ಗಂಭಿರವಾಗಿ ಗಾಯಗೊಂಡಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಎಂದರು.

ಸಿನೀಡ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಪದವಿಯನ್ನು ಓದುತ್ತಿದ್ದಳು. ಆಕೆ ಮೃತಪಟ್ಟಿದ್ದು ನಮ್ಮ ಕುಟುಂಬದವರಿಗೆ ಒಂದು ದೊಡ್ಡ ಕೆಟ್ಟ ಕನಸು ಎನ್ನಬಹುದು. ಆಕೆ ಮೃತಪಟ್ಟ ವಿಷಯ ತಿಳಿದು ತಕ್ಷಣ ನಾವು ಲಂಡನ್‍ನಿಂದ ದಕ್ಷಿಣ ಆಫ್ರಿಕಾಗೆ ತೆರೆಳಿದ್ದೇವೆ ಎಂದು ಸಿನೀಡ್ ತಂದೆ ಬಾಬ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *