ಮಾಲ್ಡೀವ್ಸ್‌ನಲ್ಲಿ ಯೋಗ ಕಾರ್ಯಕ್ರಮದ ವೇಳೆ ದಾಳಿ

ಮಾಲೆ: ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಮಾಲ್ಡೀವ್ಸ್‌ನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮಕ್ಕೆ ಗುಂಪೊಂದು ನುಗ್ಗಿ ಯೋಗ ಮಾಡಿದ್ದವರನ್ನು ಅಡ್ಡಿ ಪಡಿಸಿದ ಘಟನೆ ನಡೆದಿದೆ.

ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿಶ್ವದೆಲ್ಲೆಡೆ ಯೋಗ ಮಾಡಿ ಯೊಗ ದಿನವನ್ನು ಆಚರಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ ಯುವ, ಕ್ರೀಡೆ ಮತ್ತು ಸಮುದಾಯ ಸಬಲೀಕರಣ ಸಚಿವಾಲಯವು ಭಾರತೀಯ ಸಾಂಸ್ಕೃತಿಕ ಕೇಂದ್ರದೊಂದಿಗೆ ಮಂಗಳವಾರ ಗಲೋಲ್ಹು ಕ್ರೀಡಾಂಗಣದಲ್ಲಿ ಧ್ಯಾನ ಮತ್ತು ಯೋಗವನ್ನು ಆಯೋಜಿಸಿತ್ತು. ಆದರೆ ಅಲ್ಲಿಗೆ ಬಂದ ಗುಪೊಂದು ಯೋಗಾಭ್ಯಾಸಕ್ಕೆ ಅಡ್ಡಿ ಪಡಿಸಿ ಪ್ರತಿಭಟನೆ ನಡೆಸಿದೆ.

ಆ ಗುಂಪು ಯೋಗಾಭ್ಯಾಸದಲ್ಲಿ ಪಾಲ್ಗೊಂಡವರು ಕೂಡಲೇ ಕ್ರೀಡಾಂಗಣವನ್ನು ತೆರವು ಮಾಡಬೇಕೆಂದು ಆಗ್ರಹಿಸಿದೆ. ಅಷ್ಟೇ ಅಲ್ಲದೇ ಬೆದರಿಕೆಯನ್ನು ಹಾಕಿದೆ. ಇದರಿಂದಾಗಿ ಯೋಗಾಭ್ಯಾಸಕ್ಕೆ ಹಾಜರಾದವರಿಗೆ ಧ್ಯಾನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಘಟನೆ ಸಂಬಂಧಿಸಿದಂತೆ ಅತಿರೇಕಕ್ಕೆ ಹೋಗುವ ಮೊದಲು ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಂತಾರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸುವ ಘೋಷಣೆಯು ಕೆಲವು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಅವರು ಅದನ್ನು ನಡೆಸದಂತೆ ಬೆದರಿಕೆ ಹಾಕಿದರು. ಇದನ್ನೂ ಓದಿ: ಯೋಗ ದಿನದಂದು ವಿಜಯಪುರ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಹೇಳಿದ್ದಾರೆ. ಮಾಲ್ಡೀವ್ಸ್ ಸರ್ಕಾರವು ಈ ಸಮಸ್ಯೆಯನ್ನು ಅತ್ಯಂತ ಕಾಳಜಿಯಿಂದ ಪರಿಗಣಿಸುತ್ತಿದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಮಠದ ಶಿಷ್ಯರೊಂದಿಗೆ ಯೋಗ ಮಾಡಿದ ಪೇಜಾವರ ಶ್ರೀ

Live Tv

Comments

Leave a Reply

Your email address will not be published. Required fields are marked *