ಬೆಂಗಳೂರು: ಚುನಾವಣೆ (Election) ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಕೈ-ಕಮಲ ಪೋಸ್ಟರ್ ಸಮರ ಜೋರಾಗುತ್ತಿದೆ. ಬಿಜೆಪಿ (BJP) ಮೇಲೆ ಕಾಂಗ್ರೆಸ್ (Congress) ಅಭಿಯಾನದಿಂದ ಬ್ಯಾಡ್ ಇಂಪ್ಯಾಕ್ಟ್ ಆಗಿದ್ದು, ಪಕ್ಷದಲ್ಲಿನ ಹತಾಶೆಯ ವಾತಾರಣಕ್ಕೆ ಶಾಸಕರು (MLA) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹೈಕಮಾಂಡ್ಗೆ ದೂರು ಕೊಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹೌದು. ಕಾಂಗ್ರೆಸ್ನ ಪೇ-ಸಿಎಂ (PayCM) ಅಭಿಯಾನಕ್ಕೆ ಬಿಜೆಪಿಯಲ್ಲಿ ತಳಮಳ ಉಂಟಾಗಿದೆ. ಸಿಎಂ ಮತ್ತು ಸಚಿವರ ನಡೆಗೆ ಪಕ್ಷನಿಷ್ಠ ಶಾಸಕರಿಗೆ ಬೇಸರ ಉಂಟಾಗಿದೆ. ಸರ್ಕಾರದ ಪ್ರತ್ಯುತ್ತರ ಬಲವಾಗಿಲ್ಲ, ಸಾಫ್ಟ್ ಆಯ್ತು. ಕಾಂಗ್ರೆಸ್ ಆರೋಪಕ್ಕೆ ಸಮರ್ಥ ಕೌಂಟರ್ ಕೊಟ್ಟಿಲ್ಲ. ಪೇ-ಸಿಎಂ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ಯಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: PayCM ಪೋಸ್ಟರ್ ಅಂಟಿಸಲು ಕಾಲೇಜು ವಿದ್ಯಾರ್ಥಿಗಳ ಬಳಕೆ – ಸ್ಟೂಡೆಂಟ್ಸ್ ಸೇರಿ 6 ಮಂದಿ ವಿರುದ್ಧ ಎಫ್ಐಆರ್

ಮೊದಲಿಂದಲೂ ಕಾಂಗ್ರೆಸ್ ನವರ ತೀಕ್ಷ್ಣ ಆರೋಪಗಳಿಗೆ ಸಾಫ್ಟ್ ಧೋರಣೆ ಯಾಕೆ? ಕಾಂಗ್ರೆಸ್ ಆರೋಪಕ್ಕೆ ಸಮರ್ಥ ಕೌಂಟರ್ ಯಾಕೆ ಕೊಟ್ಟಿಲ್ಲ. ಕ್ಷೇತ್ರಗಳಲ್ಲಿ ಮುಜುಗರ ಆಗ್ತಿದ್ದು, ಕಾರ್ಯಕರ್ತರಿಗೆ, ಮತದಾರಿಗೆ ಏನ್ ಹೇಳೋದು..?, 40% ಆರೋಪ ಬಂದಾಗಲೇ ಸುಮ್ಮನಿದ್ದು ತಪ್ಪು ಮಾಡಿದ್ದೀರಿ. ಈಗ ಅದು ಹೆಮ್ಮರವಾಗಿ ನಮ್ಮ ಮುಂದೆ ನಿಂತಿದೆ, ಏನ್ಮಾಡ್ತೀರಿ ಎಂದು ಪಕ್ಷನಿಷ್ಠ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

ಚುನಾವಣೆ ಸಮೀಪವಿರುತ್ತಿದ್ದಂತೆಯೇ ನಮ್ಮ ಮೇಲೆ ಕಾಂಗ್ರೆಸ್ ಸವಾರಿ ಸಹಿಸಲ್ಲ ಎಂದು ಶಾಸಕರು ಸಂದೇಶ ರವಾನಿಸಿದ್ದಾರೆ. ಅಲ್ಲದೆ ಸರ್ಕಾರ, ಪಕ್ಷದ ಕಡೆಯಿಂದ ಆಗಿರುವ ವೈಫಲ್ಯ ಕುರಿತು ವರಿಷ್ಠರ ಗಮನಕ್ಕೂ ತರಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಕಾಂಗ್ರೆಸ್ನ PayCM ಅಸ್ತ್ರಕ್ಕೆ ಬಿಜೆಪಿಯಿಂದ KaiPe ಪ್ರತ್ಯಸ್ತ್ರ

Leave a Reply