ಯಾರಿಗೆ ವೋಟ್ ಹಾಕಿದ್ದೀಯಾ ಅವರನ್ನೇ ಕೇಳು ಎಂದ ಶಾಸಕನಿಗೆ ಗ್ರಾಮಸ್ಥರಿಂದ ಕ್ಲಾಸ್

ರಾಯಚೂರು: ಯಾರಿಗೆ ವೋಟ್ ಹಾಕಿದ್ದೀಯಾ ಅವರನ್ನೇ ಕೇಳು ಎಂದ ಮಾಜಿ ಸಚಿವ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಿಂಧನೂರಿನ ರೌಡಕುಂದಾದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೆಂಕಟರಾವ್ ನಾಡಗೌಡಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದು, ಓರ್ವ ಗ್ರಾಮಸ್ಥನಂತೂ ಏಕವಚನದಲ್ಲೇ ಶಾಸಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಏತ ನೀರಾವರಿ ವಿಚಾರವಾಗಿ ಶಾಸಕರೊಂದಿಗೆ ವಾಗ್ವಾದ ನಡೆಸಿದ ಗ್ರಾಮಸ್ಥರು, ಕೇವಲ ಭರವಸೆ ನೀಡದೆ ಕೆಲಸ ಮಾಡಿ ಅಂತ ಶಾಸಕರನ್ನ ತರಾಟೆಗೆ ತೆಗೆದುಕೊಂಡರು. ಅವರಲ್ಲಿ ಒಬ್ಬ ಏಕವಚನದಲ್ಲಿ ಮಾತನಾಡಿದ್ದಕ್ಕೆ ಗರಂ ಆದ ಶಾಸಕ ವೆಂಕಟರಾವ್ ನಾಡಗೌಡ “ನೀನು ಯಾರಿಗೆ ವೋಟ್ ಹಾಕಿದ್ದೀಯಾ ಅವರನ್ನೇ ಕೇಳು ಹೋಗು” ಅಂತ ಗದರಿದ್ದಾರೆ.

ಪ್ರಶ್ನೆ ಕೇಳಿದ್ದಕ್ಕೆ ಗದರಿದ್ದಾರೆ ಅಂತ ಶಾಸಕನ ವಿರುದ್ಧ ಗ್ರಾಮಸ್ಥರು ಜಗಳಕ್ಕೆ ಇಳಿದಿದ್ದಾರೆ. ಇದರಿಂದ ವೆಂಕಟರಾವ್ ನಾಡಗೌಡಗೆ ಇರುಸು-ಮುರುಸು ಉಂಟಾಗಿದೆ. ಶಾಸಕರಿಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Comments

Leave a Reply

Your email address will not be published. Required fields are marked *