ರಾಕಿಂಗ್ ಸ್ಟಾರ್ ಯಶ್‍ರನ್ನ ಭೇಟಿ ಮಾಡಿದ ಶ್ರೀರಾಮುಲು

ಬೆಂಗಳೂರು: ಮೊಳಕಾಲ್ಮೂರು ಶಾಸಕ ಶ್ರೀರಾಮುಲು, ನಟ ಯಶ್ ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಾಧನೆ ಬಗ್ಗೆ ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ನಾರಾಯಣ ಹೃದಯಾಲಯದಲ್ಲಿ ಭೇಟಿ ಮಾಡಿ ಸುಮಾರು 30 ನಿಮಿಷಗಳ ಕಾಲ ಯಶ್ ಜೊತೆ ಮಾತುಕತೆ ನಡೆಸಿ ಮೋದಿ ಸರ್ಕಾರದ ಸಾಧನೆ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ ಮೋದಿ ಸಾಧನೆ ಕುರಿತಾದ ಕಿರುಹೊತ್ತಿಗೆಯನ್ನು ಕೂಡ ನೀಡಿದ್ದಾರೆ. ಇದನ್ನೂ ಓದಿ: ಮೋದಿ ಕುರಿತ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ – ಪೇಜಾವರ ಶ್ರೀ

ಕಪ್ಪುಹಣ ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಮನವರಿಕೆ ಮಾಡಿದ್ದಾರೆ. ಗಂಗಾನದಿ ಶುದ್ಧೀಕರಣ ಕುರಿತು ಮೋದಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಅಂಕಿ ಸಂಖ್ಯೆ ಸಮೇತ ವಿವರಿಸಿದ್ದಾರೆ. 2014 ರ ಲೋಕಸಭಾ ಚುನಾವಣೆ ವೇಳೆ ಮೋದಿ ನೀಡಿದ ಭರವಸೆಗಳನ್ನು ಈಡೇರಿಕೆಗೆ ಮೋದಿ ಕೈಗೊಂಡ ಕ್ರಮಗಳ ಕುರಿತು ವಿವರಿಸಿದ್ದಾರೆ. ಈ ಮೂಲಕ ಬಿಜೆಪಿ ಗಣ್ಯರಲ್ಲಿ ಮೋದಿ ವಿರುದ್ಧ ತಪ್ಪು ತಿಳುವಳಿಕೆ ಮೂಡದಂತೆ ಮುಂಜಾಗೃತೆ ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಪೇಜಾವರ ಶ್ರೀ ಸನ್ಯಾಸಿಗಳು, ಅವರು ಟಿವಿ ನೋಡದ ಕಾರಣ ಕೇಂದ್ರದ ಯೋಜನೆಗಳ ಅರಿವಿಲ್ಲ: ಕರಂದ್ಲಾಜೆ

ಭೇಟಿ ಯಾಕೆ?:
ಪ್ರಧಾನಿ ಮೋದಿ ಸರ್ಕಾರದ ಸಾಧನೆ ಸಮಧಾನ ತಂದಿಲ್ಲ ಎಂಬ ಪೇಜಾವರ ಶ್ರೀಗಳ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಇದೀಗ ಎಚ್ಚೆತ್ತುಕೊಂಡಿದ್ದಾರೆ. ಪೇಜಾವರ ಶ್ರೀಗಳಂತೆ ಹಲವು ಗಣ್ಯರು ಇದೇ ರೀತಿ ಹೇಳಿಕೆಗಳನ್ನು ಕೊಟ್ರೆ ಬಿಜೆಪಿ ಹಿನ್ನಡೆಯಾಗೊದ್ರಿಂದ ವಿವಿಧ ಕ್ಷೇತ್ರದ ಗಣ್ಯರ ಭೇಟಿ ಮಾಡಿ ಮೋದಿ ಸರ್ಕಾರದ ಸಾಧನೆ ಬಗ್ಗೆ ಬಿಜೆಪಿ ನಾಯಕರು ವಿವರಿಸ್ತಿದ್ದಾರೆ. ಬಿಜೆಪಿ ನಾಯಕರು ಪ್ರತಿನಿತ್ಯ ತಮ್ಮ ಸಂಪರ್ಕದಲ್ಲಿರುವ ಗಣ್ಯರನ್ನು ಭೇಟಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಪೇಜಾವರ ಶ್ರೀಗಳು ಗಂಗಾನದಿ ಬಳಿ ಹೋಗಿಲ್ಲ, ನಾನು ಕರ್ಕೊಂಡು ಹೋಗ್ತಿನಿ: ಕೆ.ಎಸ್.ಈಶ್ವರಪ್ಪ

Comments

Leave a Reply

Your email address will not be published. Required fields are marked *