ಆಂಧ್ರದಲ್ಲಿ ಪಟ್ಟಕ್ಕೇರಿದ ಜಗನ್ ಮೋಹನ್ ರೆಡ್ಡಿ- ಸಂತಸದಲ್ಲಿ ರಾಮುಲು-ರೆಡ್ಡಿ!

ಬಳ್ಳಾರಿ: ಮಾಜಿ ಸಚಿವ, ಗಣಿಧಣಿ, ಜನಾರ್ದನ ರೆಡ್ಡಿ ಹಾಗೂ ಶಾಸಕ ಶ್ರೀರಾಮುಲುರ ಅದೃಷ್ಟ ಖುಲಾಯಿಸಿದೆ. ಕಷ್ಟದಲ್ಲಿ ಕೈಬಿಡದೇ ಜಗನ್ ಜೊತೆಗಿದ್ದ ರೆಡ್ಡಿ-ರಾಮುಲುರ ವೈಭವ ಮರುಕಳಿಸುವ ಕಾಲ ಸನ್ನಿಹಿತವಾಗಿದೆ. ಆಂಧ್ರಪ್ರದೇಶದಲ್ಲಿ ಆಪ್ತಮಿತ್ರ ವೈಎಸ್‍ಆರ್ ಜಗನ್, ಸಿಎಂ ಆಗೋ ಮೂಲಕ ಲೋಕಕಣದಲ್ಲಿ ಭರ್ಜರಿ ಗೆಲುವು ಸಾಧಿಸಿರುವುದು ರೆಡ್ಡಿ-ರಾಮುಲು ಬಳಗದ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಆಂಧ್ರದ ಮಾಜಿ ಸಿಎಂ ವೈಎಸ್ ರಾಜಶೇಖರರೆಡ್ಡಿಗೂ ಬಳ್ಳಾರಿಯ ಗಾಲಿ ಜರ್ನಾದನರೆಡ್ಡಿಗೂ ಎಲ್ಲಿಲ್ಲದ ನಂಟು. ಇದೀಗ ಆಂಧ್ರದಲ್ಲಿ ರಾಜಶೇಖರ ರೆಡ್ಡಿ ಮಗ ಜಗನ್ ಮೋಹನ್‍ರೆಡ್ಡಿ ಗೆಲುವಿನಿಂದ ರಾಮುಲು ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಯಾಕಂದ್ರೆ ಜಗನ್ ಗೆಲುವಿನಿಂದ ರೆಡ್ಡಿ ರಾಮುಲುರ ವೈಭವದ ದಿನಗಳು ಮತ್ತೆ ಮರುಕಳಿಸೋ ಸಾಧ್ಯತೆ ಇದೆ.

ರಾಜಶೇಖರ್ ರೆಡ್ಡಿ ಜೊತೆಗೆ ವ್ಯಾವಹಾರಿಕ ಹಾಗೂ ರಾಜಕೀಯ ನಂಟು ಹೊಂದಿದ್ದ ರೆಡ್ಡಿ-ರಾಮುಲು ಜಗನ್ ಮೋಹನ್ ರೆಡ್ಡಿಯ ಕಷ್ಟ ಕಾಲದಲ್ಲೂ ಜೊತೆಗಿದ್ದರು. ಅಲ್ಲದೆ ಬಳ್ಳಾರಿ, ಚಿತ್ರದುರ್ಗ, ರಾಯಚೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರೋ ಆಂಧ್ರದ ಹಲವೆಡೆ ಜಗನ್ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಲು ಶ್ರಮವಹಿಸಿದ್ದರು. ಹೀಗಾಗಿ ಜಗನ್ ಇದೀಗ ಅಧಿಕಾರಕ್ಕೆ ಬಂದಿರೋದು ಆಂಧ್ರದಲ್ಲಿ ಅರ್ಧಕ್ಕೆ ನಿಂತಿರೋ ರೆಡ್ಡಿ-ರಾಮುಲುರ ಹಲವು ಯೋಜನೆಗಳಿಗೆ ಮತ್ತೆ ಚಾಲನೆ ಸಿಗಲಿದೆ.

ವೈಎಸ್‍ಆರ್ ಕುಟುಂಬದ ಸಹಾಯ ಪಡೆದೇ ರೆಡ್ಡಿ, ಓಎಂಸಿ ಗಣಿಗಾರಿಕೆ ಹಾಗೂ ಬ್ರಹ್ಮಣಿ ಸ್ಟ್ರೀಲ್ ಆರಂಭಿಸಿದ್ದರು. ಇದೀಗ ಜಗನ್ ಸಿಎಂ ಆಗ್ತಿರೋದು ರೆಡ್ಡಿ-ರಾಮುಲುರ ಅದೃಷ್ಟ ಖುಲಾಯಿಸುವಂತೆ ಮಾಡಿದೆ ಅಂದರೆ ತಪ್ಪಾಗಲಾರದು.

Comments

Leave a Reply

Your email address will not be published. Required fields are marked *