ಸಚಿವ ಸಂಪುಟದ ಸುಳಿವು ಕೊಟ್ಟ ಶಾಸಕ ಎಸ್.ಆರ್ ವಿಶ್ವನಾಥ್

ನೆಲಮಂಗಲ: ನಾಯಕತ್ವ ಬದಲಾವಣೆ ಏನಿಲ್ಲ. ಬಹುಶಃ ಕೆಲವು ಮಂತ್ರಿಗಳನ್ನ ಖಾಲಿ ಸ್ಥಾನ ತುಂಬಬಹುದು ಎಂದು ಹೇಳುವ ಮೂಲಕ ಶಾಸಕ ಎಸ್‍ಆರ್ ವಿಶ್ವನಾಥ್ ಅವರು ಸಚಿವ ಸಂಪುಟದ ಸುಳಿವು ಕೊಟ್ಟರು.

ನೆಲಮಂಗಲದ ಬಸವಣ್ಣ ದೇವರ ಮಠದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ರಾಜ್ಯಕ್ಕೆ ಅಮಿತ್ ಶಾ ಆಗಮನ ಕುರಿತಾಗಿ ಪ್ರತಿಕ್ರಿಯಿಸಿದರು. ನನಗೂ ಗೊತ್ತಿಲ್ಲ ಇವಾಗ ಹೋಗ್ತಾ ಇದ್ದೀನಿ. ಅಮಿತ್ ಶಾ ಅವರದ್ದೇ ಕಾರ್ಯಕ್ರಮ ಅಲ್ಲೋದ ಮೇಲೆ ಗೊತ್ತಾಗುತ್ತದೆ ಎಂದರು.

6, 7 ಸ್ಥಾನಗಳು ಖಾಲಿ ಇದೆ ಅವನ್ನು ಭರ್ತಿ ಮಾಡಬಹುದು. ನಾನು ಈಗಾಗಲೇ ಕ್ಯಾಬಿನೆಟ್ ದರ್ಜೆ ಬಿಡಿಎನಲ್ಲಿ ಇದ್ದೇನೆ. ಅದರಲ್ಲೆ ಆನಂದ ಪಡುತ್ತಿದ್ದೇನೆ ಎಮದು ವಿಶ್ವನಾಥ್ ತಿಳಿಸಿದರು. ಇದನ್ನೂ ಓದಿ: ಗುಜರಾತ್‌, ಉತ್ತರಾಖಂಡ್‌, ಉತ್ತರ ಪ್ರದೇಶ: ಕರ್ನಾಟಕದಲ್ಲಿ ಯಾವ ಮಾಡೆಲ್‌?

Comments

Leave a Reply

Your email address will not be published. Required fields are marked *