ಬಂಜಾರಾ, ಕೊರಚ, ಕೊರಮ, ಬೋವಿ ಶಾಶ್ವತವಾಗಿ ಎಸ್‌ಸಿ ಪಟ್ಟಿಯಲ್ಲಿರುತ್ತದೆ- ಪಿ.ರಾಜೀವ್

ಬೆಳಗಾವಿ: ಬಂಜಾರಾ, ಕೊರಚ, ಕೊರಮ, ಬೋವಿ ಇವು ಶಾಶ್ವತವಾಗಿ ಎಸ್‌ಸಿ (SC) ಪಟ್ಟಿಯಲ್ಲಿರುತ್ತದೆ. ಇದನ್ನು ತೆಗೆಯುವ ಪ್ರಸ್ತಾವನೆ ಇಲ್ಲ ಎಂದು ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ಪಿ.ರಾಜೀವ್ (P.Rajeev) ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಸಿ ಸಮುದಾಯದ ಒಳಮೀಸಲಾತಿಗೆ ಬಂಜಾರ ಸಮುದಾಯ ವಿರೋಧ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು. ಪರಿಶಿಷ್ಟ ಜಾತಿ ಎಂದರೆ ಏನು ಎಂದು ಮೊದಲು ತಿಳಿದುಕೊಳ್ಳಬೇಕು. ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಕ್ಕೆ ಒಂದು ಗ್ರೂಪ್ ಮಾಡಿದ್ದಾರೆ. 97 ಜಾತಿ ಸೇರಿ ಎಡ, ಬಲ ಮತ್ತು ಅಲೆಮಾರಿ ಗುಂಪು ಮಾಡಿದ್ದಾರೆ. ನಾಲ್ಕು ಜಾತಿಗಳಿಗೆ ಮಾತ್ರ ನಾಲ್ಕೂವರೆ ಪರ್ಸೆಂಟ್ ಮೀಸಲಾತಿ ಕೊಟ್ಟಿದ್ದಾರೆ. ಸದಾಶಿವ ಆಯೋಗದಲ್ಲಿ ಮೂರು ಪರ್ಸಂಟ್ ಶಿಪಾರಸ್ಸು ಮಾಡಿದ್ದರು. ನಮ್ಮ ಬೇಡಿಕೆ ಇದ್ದದ್ದು ಎರಡು ಪರ್ಸೆಂಟ್ ಮಾತ್ರ. ಬಂಜಾರ ಸಮುದಾಯವನ್ನ ಎಸ್‌ಸಿ ಮೀಸಲಾತಿಯಿಂದ ಕೈ ಬಿಡುವ ಸಂಚು ನಡೆದಿದೆ. ಇದಕ್ಕೆ ಲಿಖಿತವಾಗಿ ರಾಜ್ಯ ಸರ್ಕಾರ ಉತ್ತರ ಕೊಡಬೇಕು ಎನ್ನುವ ಬೇಡಿಕೆ ಇತ್ತು. ಹಿಂದಿನ ಸರ್ಕಾರ ಇದಕ್ಕೆ ಉತ್ತರ ಕೊಡುವ ಕೆಲಸ ಮಾಡಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಜೆಡಿಎಸ್ ಜೊತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ : ಸಿ.ಟಿ. ರವಿ 

ಬೊಮ್ಮಾಯಿ (Basavaraj Bommai) ಅವರು ನ್ಯಾಷನಲ್ ಎಸ್‌ಸಿ ಕಮಿಷನ್‌ಗೆ ಫೆ.16ರಂದು ಪತ್ರ ಬರೆದಿದ್ದರು. ಬಂಜಾರಾ, ಕೊರಚ, ಕೊರಮ, ಬೋವಿ ಇವು ಶಾಶ್ವತವಾಗಿ ಎಸ್‌ಸಿ ಪಟ್ಟಿಯಲ್ಲಿರುತ್ತದೆ. ಇದನ್ನು ತೆಗೆಯುವ ಪ್ರಸ್ತಾವನೆ ಇಲ್ಲ. ಈ ಕೆಲಸ ಇಲ್ಲಿಯವರೆಗೆ ಯಾರೂ ಮಾಡಿರಲಿಲ್ಲ. ಈ ಕೆಲಸವನ್ನು ಬೊಮ್ಮಾಯಿ ಅವರು ಮಾಡಿದ್ದಾರೆ. ಸುಮ್ಮನೆ ಯಾರೋ ಗೊಂದಲ ಸೃಷ್ಟಿ ಮಾಡಲು ಹೊರಟಿದ್ದಾರೆ. ಅವರಿವರ ಮನೆ ಮೇಲೆ ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಯಾರೂ ಸಹ ಗೊಂದಲಕ್ಕೆ ಒಳಗಾಗಬಾರದು. ನಮ್ಮ ಬೇಡಿಕೆಯನ್ನು ಬೊಮ್ಮಾಯಿಯವರು ಈಡೇರಿಸಿದ್ದಾರೆ ಎಂದರು. ಇದನ್ನೂ ಓದಿ: ನನ್ನ ಗುರಿ ಮುಟ್ಟುವವರೆಗೂ ನಾನು ವಿರಮಿಸುವುದಿಲ್ಲ: ಹೆಚ್.ಡಿ ಕುಮಾರಸ್ವಾಮಿ