ಅಪ್ಪಂದಿರ ಹೆಸರಲ್ಲಿ ಶಾಸಕ ಮೊಯ್ದಿನ್ ಬಾವಾ, ಅಭಯ್‍ಚಂದ್ರ ಜೈನ್ ನಡುಬೀದಿಯಲ್ಲಿ ಕಿತ್ತಾಟ- ವಿಡಿಯೋ ನೋಡಿ

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಕಾಂಗ್ರೆಸ್ ಭಿನ್ನಮತ ಮತ್ತೆ ಸ್ಫೋಟಗೊಂಡಿದೆ. ಇದಕ್ಕೆ ಸಾಕ್ಷಿಯಾಗಿದ್ದು ಕಾಂಗ್ರೆಸ್ ಶಾಸಕರಾದ ಮೊಯಿದ್ದೀನ್ ಬಾವಾ ಹಾಗೂ ಅಭಯಚಂದ್ರ ಜೈನ್ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪ್ಪಿದ್ದಾರೆ.

ಹೌದು. ಇಂದು ಮಂಗಳೂರಿನ ಪಿಲಿಕುಳದಲ್ಲಿ ನೂತನವಾಗಿ ನಿರ್ಮಾಣಗೊಂಡ ಸ್ವಾಮಿ ವಿವೇಕಾನಂದ ತಾರಾಲಯದ ಉದ್ಘಾಟನಾ ಕಾರ್ಯಕ್ರಮವಿತ್ತು. ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಮ್ ಉದ್ಘಾಟನೆಗೆ ಆಗಮಿಸಿದ್ರು. ಆದರೆ ಅವರ ಎದುರಲ್ಲೇ ಕಾಂಗ್ರೆಸ್ ಈ ಇಬ್ಬರು ಶಾಸಕರು ಕೈಕೈ ಮಿಲಾಯಿಸಿ ಹೊಡೆದಾಟಕ್ಕೆ ಮುಂದಾಗಿದ್ದರು.

ಕಾರ್ಯಕ್ರಮ ಆರಂಭಕ್ಕೆ ಮೊದಲು ಮಂಗಳೂರು ಮೇಯರ್ ಕವಿತಾ ಸನಿಲ್ ಜೊತೆ ಶಾಸಕ ಮೊಯಿದ್ದೀನ್ ಬಾವಾ ಮಾತುಕತೆ ನಡೆಸುತ್ತಿದ್ದರು. ಜೊತೆಗಿದ್ದವರು ಮೇಯರ್ ಅವಧಿ ಮುಗಿದ ಬಳಿಕ ಏನು ಮಾಡ್ತೀರಿ ಕವಿತಾ ಎಂದು ಪ್ರಶ್ನಿಸಿದ್ದಕ್ಕೆ ತಕ್ಷಣ ಮೊಯಿದ್ದೀನ್ ಬಾವಾ ಅವರು ಮುಂದೆ ಮೂಡಬಿದ್ರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದರು. ಈ ವೇಳೆ ಬಾವಾ ಅವರ ಹಿಂದೆ ನಿಂತಿದ್ದ ಶಾಸಕ ಅಭಯಚಂದ್ರ ಜೈನ್ ಕೋಪಗೊಂಡು “ಆಕಾಂಕ್ಷಿ ನಿನ್ನ (ಅಪ್ಪ)” ಎಂದು ಹೇಳಿ ಬಿಟ್ಟರು. ಇದರಿಂದ ಕೋಪಗೊಂಡ ಶಾಸಕ ಬಾವಾ ನನ್ನ ಅಪ್ಪ ಅಲ್ಲ ನಿನ್ನ ಅಲ್ಲ ಎಂದು ಹೇಳಿದ್ದು ಕೈ ಕೈ ಮಿಲಾಯಿಸಲು ಮುಂದಾಗಿದ್ದರು.

ತಕ್ಷಣ ಅಲ್ಲಿ ನೆರೆದಿದ್ದವರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ಈ ವೇಳೆ ಚಿತ್ರೀಕರಣ ಮಾಡುತ್ತಿದ್ದವರನ್ನು ನೋಡಿದ ಸಚಿವ ಸೀತರಾಮ್ ಇದೆಲ್ಲಾ ತಮಾಷೆಗಾಗಿಯಪ್ಪ ಶೂಟಿಂಗ್ ಮಾಡ್ಬೇಡಿ ಎಂದರು. ಬಳಿಕ ನಡೆದ ಕಾರ್ಯಕ್ರಮದಲ್ಲೂ ಶಾಸಕರ ಮುನಿಸು ಎದ್ದು ಕಾಣುತ್ತಿತ್ತು.

https://www.youtube.com/watch?v=0z7Mb-xoteA&feature=youtu.be

Comments

Leave a Reply

Your email address will not be published. Required fields are marked *