ಅಗ್ನಿಪಥ್ ಯೋಜನೆ ಯುವಕರಿಗೆ ವರದಾನವಾಗುತ್ತದೆ: ಕುಮಟಳ್ಳಿ

ಚಿಕ್ಕೋಡಿ(ಬೆಳಗಾವಿ): ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಗ್ನಿಪಥ್ ಯೋಜನೆಯನ್ನು ಬಹಳ ಸೂಕ್ಷ್ಮವಾಗಿ ಹಲವಾರು ತಜ್ಞರನ್ನು ಕೂಡಿಸಿಕೊಂಡು ವಿಶೇಷವಾಗಿ ವಿಶ್ಲೇಷಣೆ ಮಾಡಿಕೊಂಡು ಯೋಜನೆ ತಂದಿದ್ದಾರೆ. ಇದರಿಂದಾಗಿ ದೇಶದ ಯುವಕರಿಗೆ ಅಗ್ನಿಪಥ್ ಯೋಜನೆಯ ವರದಾನವಾಗುತ್ತದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.

ARMY

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಹಲವಾರು ನಿರುದ್ಯೋಗ ಯುವಕರಿಗೆ ಯೋಜನೆಯಿಂದ ಪ್ರಾಧ್ಯಾನತೆ ಸಿಗುತ್ತದೆ. ಕೇವಲ ನಾಲ್ಕು ವರ್ಷದಲ್ಲಿ ದೇಶ ಸೇವೆ ಜೊತೆಗೆ ತಮ್ಮ ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸಲು ಯೋಜನೆ ಉತ್ತಮವಾಗಿದೆ. ಯೋಜನೆಯ ಬಗ್ಗೆ ಯುವಕರು ಹಾಗೂ ಹಳ್ಳಿಗಳಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೆಲವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದರು.

ನಾನು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿದಾಗ, ಹಾಗೂ ರಸ್ತೆಯಲ್ಲಿ ಹೋಗುವ ಕಾಲೇಜು ಹುಡುಗರನ್ನು ಕರೆದು ಅಗ್ನಿಪಥ್ ಯೋಜನೆ ಬಗ್ಗೆ ನಾನು ಕೇಳುತ್ತಿದ್ದೇನೆ. ಉತ್ತಮ ಯೋಜನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನಮ್ಮ ಹಳ್ಳಿಯ ಮಕ್ಕಳಿಗೆ ಈ ಯೋಜನೆ ವರದಾನವಾಗುತ್ತದೆ ಎಂದು ಶಾಸಕರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮರಾಠಿ ಬೋರ್ಡ್ ಹಾಕಿ ಇಲ್ಲದಿದ್ದರೆ ಕನ್ನಡ ನಾಮಫಲಕ ಇರಲ್ಲ ಎಂದು MES ಪುಂಡಾಟ – ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು

ಕೆಲವರು ಪರ-ವಿರೋಧ ಚರ್ಚೆಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ಪಕ್ಷ ಯೋಜನೆಯ ಬಗ್ಗೆ ಯುವಕರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸುತ್ತಿದ್ದಾರೆ. ಕೆಲವು ಯುವಕರು ನಾಲ್ಕು ವರ್ಷ ಕೆಲಸ ಮಾಡಿ ತಿರುಗಿ ಮನೆಗೆ ಬರುತ್ತಾರೆ. ಇನ್ನೂ ಸೇವೆ ಮಾಡಬೇಕೆಂದು ಅನ್ನುವರು ಸೇನೆಯಲ್ಲಿ ಮುಂದುವರಿಯುತ್ತಾರೆ. ಯೋಜನೆಯಿಂದ ಲಾಭವೇ ಹೊರತು ಯಾವುದೇ ನಷ್ಟವಿಲ್ಲವೆಂದು ಪ್ರತಿಕ್ರಿಯೆ ನೀಡಿದರು.

Live Tv

Comments

Leave a Reply

Your email address will not be published. Required fields are marked *