ನಿನ್ನ ಮನೆ ಹಾಳಾಗಲಿ, ನಿನ್ನ ವಂಶ ನಾಶವಾಗಲಿ: ವೆಂಕಟೇಶ್‌ ವಿರುದ್ಧ ಶಾಸಕ ಕೆ. ಮಹದೇವ್ ಕಿಡಿ

ಮೈಸೂರು: ನಿನ್ನ ಮನೆ ಹಾಳಾಗಲಿ, ನಿನ್ನ ವಂಶ ನಾಶವಾಗಲಿ ಎಂದ ಮಾಜಿ ಶಾಸಕ ವೆಂಕಟೇಶ್‌ (Venkatesh) ವಿರುದ್ಧ ಜೆಡಿಎಸ್ (JDS) ಶಾಸಕ ಕೆ ಮಹದೇವ್ (K Mahadev) ಆಕ್ರೋಶ ಹೊರಹಾಕಿದರು.

ಪಿರಿಯಾಪಟ್ಟಣದ (Periyapatna) ನಾಡ ಅಧಿದೇವತೆ ಮಸಣಿಮ್ಮ ದೇವಾಲಯ ವಾರ್ಷಿಕೋತ್ಸವದ ನಡೆಯುತ್ತಿರುವ ಸಂದರ್ಭದಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಶಾಸಕರ ನಡುವೆ ಆಣೆ ಪ್ರಮಾಣದ ವಾರ್ ನಡೆಯುತ್ತಿದೆ. ಮಸಣಿಮ್ಮ ದೇವಾಲಯದ ಹಣವನ್ನು ಶಾಸಕ ಕೆ.ಮಹದೇವ್ ಅವರು ದುರುಪಯೋಗ ಮಾಡಿದ್ದಾರೆ ಎಂದು ಮಾಜಿ ಶಾಸಕ ವೆಂಕಟೇಶ್ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ವೆಂಕಟೇಶ್ ಅವರ ವಿರುದ್ಧ ಶಾಸಕ ಮಹದೇವ್‌ ವಾಗ್ದಾಳಿ ನಡೆಸಿದರು.

ಈ ಬಗ್ಗೆ ಮಾತನಾಡಿದ ಶಾಸಕ, ದೇವಾಲಯ ಹಣದಲ್ಲಿ ಒಂದು ರೂ. ಲೂಟಿ ಮಾಡಿದ್ರು ಆ ದೇವತೆ ತನಗೆ ಶಿಕ್ಷೆ ನೀಡಲಿ. ಮಾಜಿ ಶಾಸಕ ವೆಂಕಟೇಶ್‌ ಅವರಿಗೆ ನಾನು ಬಹಿರಂಗವಾಗಿ ಆಹ್ವಾನ ನೀಡುತ್ತಿದ್ದೇನೆ‌. ದೇವಾಲಯಕ್ಕೆ ಇಬ್ಬರು ಬಂದು ತಾಯಿ ಎದುರು ಇಬ್ಬರು ಹೂವಿನ ಹಾರ ಹಾಕಿಕೊಂಡು ಆಣೆ ಪ್ರಮಾಣ ಮಾಡೋಣ. ನಾನು ಏನನ್ನಾದರೂ ಹಣ ಲೂಟಿ ಮಾಡಿದರೇ ನನ್ನ ವಂಶ ನಾಶವಾಗಲಿ. ಆರೋಪದಲ್ಲಿ ಹುರುಳು ಇಲ್ಲದಿದ್ದರೇ ನಿನ್ನ ವಂಶ ಹಾಳಾಗಲಿ, ನಿನ್ನ ಮನೆ ಹಾಳಾಗಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಮಾರ್ಚ್ 11ಕ್ಕೆ ಇಡಿ ಮುಂದೆ ಹಾಜರಾಗಲಿದ್ದಾರೆ KCR ಪುತ್ರಿ ಕವಿತಾ

ಮಾಜಿ ಶಾಸಕ ‌ವೆಂಕಟೇಶ್‌ಗೆ ದೇವರ ಮೇಲೆ ನಂಬಿಕೆಯೇ ಇಲ್ಲ. ಒಂದು ಹಣ್ಣು ಕಾಯಿ ಮಾಡಿಸದೇ ಇರುವ ವ್ಯಕ್ತಿ ಅವರು. ನಾನು ಸಂಸ್ಕಾರ ಕುಟುಂಬದಲ್ಲಿ ಹುಟ್ಟಿರುವ ವ್ಯಕ್ತಿ ಎಂದು ಪರೋಕ್ಷವಾಗಿ ವೆಂಕಟೇಶ್‌ ಅವರನ್ನು ಟೀಕಿಸಿದರು. ಇದನ್ನೂ ಓದಿ:  ಪಾರಿವಾಳದ ಕಾಲಿನಲ್ಲಿ ಕ್ಯಾಮೆರಾ – ಬೇಹುಗಾರಿಕೆ ಶಂಕೆ

Comments

Leave a Reply

Your email address will not be published. Required fields are marked *