ವಿಡಿಯೋ: ಪಿಎಸ್‍ಐ ಗೆ ಸಾರ್ವಜನಿಕವಾಗಿ ಅವಾಜ್ ಹಾಕಿದ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ

ಕೊಪ್ಪಳ: ಗಂಗಾವತಿ ಶಾಸಕರಾದ ಇಕ್ಬಾಲ್ ಅನ್ಸಾರಿ ಪಿಎಸ್‍ಐ ರಾಮಣ್ಣ ಎಂಬವರಿಗೆ ಸಾರ್ವಜನಿಕವಾಗಿ ಅವಾಜ್ ಹಾಕಿದ್ದಾರೆ.

ಗಂಗಾವತಿ ಠಾಣೆಯ ಪಿಎಸ್‍ಐ ರಾಮಣ್ಣ ಅವರಿಗೆ ಶಾಸಕರು ಫೋನ್‍ನಲ್ಲಿ ಸಾರ್ವಜನಿಕವಾಗಿ ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ. ಸದ್ಯ ರಾಮಣ್ಣ ಬಳ್ಳಾರಿ ಜಲ್ಲೆಯ ಕಂಪ್ಲಿ ಪಟ್ಟಣಕ್ಕೆ ವರ್ಗವಾದ ಬೆನ್ನಲ್ಲೇ ವಿಡಿಯೋ ವೈರಲ್ ಆಗಿದೆ.

ಏನಿದು ಘಟನೆ?: ಕೆಲವು ದಿನಗಳ ಹಿಂದೆ ಕುರಿಗಳ ಕಳ್ಳತನ ಪ್ರಕರಣದಲ್ಲಿ ಕೆಲವು ಮಾಂಸದಂಗಡಿಯ ಮಾಲೀಕರನ್ನು ಕರೆತಂದು ವಿಚಾರಣೆ ನಡೆಸಿದ್ದರು. ಮಾಂಸದ ಅಂಗಡಿಯ ವ್ಯಾಪಾರಿಗಳು ಶಾಸಕರ ಮುಂದೆ ಬಂದು ನಮ್ಮನ್ನ ವಿನಾಕಾರಣ ವಿಚಾರಣೆ ನಡೆಸುತ್ತಿದ್ದಾರೆ ಎಂದು ದೂರಿದ್ದರು. ವ್ಯಾಪಾರಿಗಳ ಮಾತು ಕೇಳುತ್ತಿದ್ದಂತೆ ಯೋಚನೆ ಮಾಡದೇ ಪಿಎಸ್‍ಐಗೆ ಕರೆ ಮಾಡಿ, ನಿಮಗೆ ಗಂಗಾವತಿ ಬೇಸರ ಆಗಿದ್ರೆ ಹೇಳಿ ವರ್ಗಾವಣೆ ಮಾಡಿಸ್ತೀನಿ. ನೀನು ಒಳ್ಳೆಯವನು ಅಂತಾ ಇಟ್ಟುಕೊಂಡಿದ್ದೇನೆ. ವಿನಾಕಾರಣ ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ರೆ ಪೊಲೀಸ್ ಸ್ಟೇಷನ್‍ಗೆ ಮುತ್ತಿಗೆ ಹಾಕಿಸ್ತೀನಿ ಎಂದು ಅವಾಜ್ ಹಾಕುವ ಮೂಲಕ ಅಧಿಕಾರ ದರ್ಪ ಮೆರೆದಿದ್ದಾರೆ.

ಇದು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವಂತಿದೆ ಎಂದು ಹೇಳಿರೋ ಸಾರ್ವಜನಿಕರು, ಪೊಲೀಸ್ ಇಲಾಖೆಯ ಕೆಲಸದಲ್ಲಿ ಮಧ್ಯಪ್ರವೇಶಿಸಿರುವ ಅನ್ಸಾರಿ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://www.youtube.com/watch?v=TDzYcfEYSCA

Comments

Leave a Reply

Your email address will not be published. Required fields are marked *