ಕಲುಷಿತ ನೀರು ಕುಡಿದು ಜನ ಸಾವನ್ನಪ್ಪಿರೋದು ತಲೆ ತಗ್ಗಿಸುವ ವಿಚಾರ: ಡಾ.ಶಿವರಾಜ್ ಪಾಟೀಲ್

ರಾಯಚೂರು: ನಗರಸಭೆ ಸರಬರಾಜು ಮಾಡಿದ್ದ ಕಲುಷಿತ ನೀರು ಕುಡಿದು ಇಬ್ಬರು ಸಾವನ್ನಪ್ಪಿರುವ ಹಿನ್ನೆಲೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ನೀರಿನ ದೋಷದಿಂದ ಜನ ಸಾವನ್ನಪ್ಪಿರುವುದು ನಾವು ತಲೆ ತಗ್ಗಿಸುವಂತ ವಿಚಾರ. ಇದರಿಂದ ನಾವು ಪಾಠಕಲಿಯಬೇಕಿದೆ ಅಂತ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

ಮೃತರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 50 ಸಾವಿರ ರೂಪಾಯಿ ವೈಯಕ್ತಿಕ ಪರಿಹಾರ ನೀಡಿದ್ದಾರೆ. ಬಳಿಕ ಮಾತನಾಡಿದ ಶಾಸಕರು, ಇದು ಯಾರಿಗೂ ಒಳ್ಳೆಯ ಬೆಳವಣಿಗೆ ಅಲ್ಲ. ಹೀಗಾಗಿ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದೇನೆ. ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನ ಕಿತ್ತೊಗೆಯುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ವಾಂತಿ ಭೇದಿಯಿಂದ ಸಾವನ್ನಪ್ಪಿದ್ದಾನೆ. ಮೃತಪಟ್ಟ ಇಬ್ಬರಿಗೆ ಈ ಮೊದಲು ಯಾವುದೇ ಕಾಯಿಲೆ ಇದ್ದರೂ ನೀರಿನ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ಇದು ನಗರಸಭೆಯ ಆಡಳಿತ ವೈಫಲ್ಯ, ನಮಗೆ ಇದೊಂದು ದೊಡ್ಡ ಪಾಠ ಎಂದಿದ್ದಾರೆ. ಮಳೆಗಾಲದ ಆರಂಭಿಕ ದಿನಗಳಲ್ಲಿ ನೀರನ್ನ ಎಲ್ಲರೂ ಕುದಿಸಿ, ಸೋಸಿ ಕುಡಿಯಬೇಕು. ಇದನ್ನೂ ಓದಿ: ಮಸೀದಿಯೋ, ಮಂದಿರವೋ ಕೋರ್ಟ್‍ನಲ್ಲಿ ನೋಡುತ್ತೇವೆ – ಮೊದಲು ಅಕ್ರಮವಾಗಿ ನಡೆಸುತ್ತಿರುವ ಮದರಸಾವನ್ನು ನಿಲ್ಲಿಸಿ

ಮೃತಪಟ್ಟವರ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ನೀಡಿದ್ದೇನೆ, ಸರ್ಕಾರದಿಂದ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ. ಜಿಲ್ಲಾಡಳಿತದೊಂದಿದೆ ಸಭೆ ನಡೆಸಿ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಶಿವರಾಜ್ ಪಾಟೀಲ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *