ಬೇಗ ಹುಷಾರಾಗಿ ಬನ್ನಿ ಎಂದ ಕಾಂಗ್ರೆಸ್ ಮುಖಂಡನಿಗೆ ಸಿಟಿ ರವಿ ತಿರುಗೇಟು

ಬೆಂಗಳೂರು: ತುಮಕೂರಿನಲ್ಲಿ ನಡೆದ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರೊಬ್ಬರು ವ್ಯಂಗ್ಯವಾಡಿದ್ದಕ್ಕೆ ಬಿಜೆಪಿ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದಾರೆ.

ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರಿಗೆ ಸಿ.ಟಿ ರವಿ ಅವರು ತಳಮಟ್ಟದಿಂದಲೇ ಜನಪರ ಕೆಲಸಮಾಡಿಕೊಂಡು ಅದೇ ಜನರ ಬೆಂಬಲದೊಂದಿಗೆ ಬಂದಿರುವುದಾಗಿ ಹೇಳುವ ಮೂಲಕ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.

ಚಂದ್ರಶೇಖರ್ ಹೇಳಿದ್ದೇನು..?
`ಬಡವ ಕನಣ್ಣ ಗುಡ್ ಬೇಡಿ’ ಎಂದು ಕಾರಿನ ಹಿಂದೆ ಬರೆದಿರೋ ಫೋಟೋ ತೆಗೆದುಕೊಂಡು ಅದರ ಮೇಲೆ ಸಿಟಿ ರವಿ ಅವರ ಹಿಟ್ ರನ್ ಕೇಸ್ ಬಳಿಕವೆಂದು ಬರೆದು, ಸಿಟಿ ರವಿ ಅವರೇ ಬೇಗ ಹುಷಾರಾಗಿ ಬನ್ನಿ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟನ್ನು ಶಾಸಕರಿಗೆ ಟ್ಯಾಗ್ ಮಾಡಿದ್ದಾರೆ.

ಸಿ.ಟಿ ರವಿ ಹೇಳಿದ್ದೇನು..?
ಹಿಟ್ ಆ್ಯಂಡ್ ರನ್ ಕಾಂಗ್ರೆಸ್ ನವರ ಜಾಯಮಾನ, ದಶಕಗಳಿಂದ ಜನರಿಗೆ ಹಿಟ್ ಮಾಡಿ ಕಾಂಗ್ರೆಸ್ ನವರು ರನ್ ನನ್ನಷ್ಟೇ ಮಾಡಿರುವುದು. ತಳಮಟ್ಟದಿಂದ ಸುಮಾರು ಜನಪರ ಕೆಲಸ ಮಾಡಿಕೊಂಡು ಅದೇ ಜನರ ಬೆಂಬಲದೊಂದಿಗೆ ಬಂದಿರುವವನು ನಾನು. ಅಪಘಾತ ನಂತರ ಜವಾಬ್ದಾರಿಯಿಂದ ಅಂಬುಲೆನ್ಸ್ ವ್ಯವಸ್ಥೆ ಮಾಡಿಸಿ ಪೋಲೀಸ್ ಅನುಮತಿಯೊಂದಿಗೆ ಹೊರಟಿದ್ದು ನಿಮಗೆ ಅರಗಿಸಲಾಗದ ಸತ್ಯ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೇಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಾಸಕ ಸಿ ಟಿ ರವಿಯವರಿದ್ದ ಕಾರು ಅಪಘಾತಕ್ಕೀಡಾಗಿ ಸುನಿಲ್ ಗೌಡ ಹಾಗೂ ಶಶಿಕುಮಾರ್ ಎಂಬ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *