ಹಿಂದೂಗಳನ್ನು ವಿಭಜಿಸಿ, ಅಲ್ಪಸಂಖ್ಯಾತರನ್ನು ಒಟ್ಟು ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ- ಸಿಟಿ ರವಿ

ಬೆಳಗಾವಿ: ಕಾಂಗ್ರೆಸ್ ಹಿಂದೂಗಳನ್ನು ವಿಭಜಿಸಿ ಅಲ್ಪಸಂಖ್ಯಾತರನ್ನು ಒಟ್ಟು ಮಾಡುವ ತಂತ್ರದಲ್ಲಿ ಯಶಸ್ವಿಯಾಗಿದೆ. ವಿಭಜನೆಯ ತಂತ್ರಕ್ಕೆ ಹಿಂದೂ ಮುಖವಾಡವನ್ನು ಕಾಂಗ್ರೆಸ್ ಪಕ್ಷ ಧರಿಸಿತ್ತು. ತಾನು ಕೂಡ ಹಿಂದುತ್ವವವಾದಿ ಪ್ರತಿಪಾದಕ ಎಂದು ತೋರಿಸಿಕೊಳ್ಳುವ ಮೂಲಕ ತನ್ನನ್ನು ತಾನು ಗೋತ್ರದಲ್ಲಿ ಗುರುತಿಸಿಕೊಳ್ಳುವ ಕೆಲಸವನ್ನು ಕೂಡ ಕಾಂಗ್ರೆಸ್ ಮುಖಂಡರು ಮಾಡಿದ್ರು ಶಾಸಕ ಅಂತ ಸಿಟಿ ರವಿ ಅಂದ್ರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜಸ್ಥಾನ ಮತ್ತು ಛತ್ತೀಸ್‍ಗಢದ ಆರಂಭಿಕ ಫಲಿತಾಂಶದ ಹಿನ್ನೆಲೆಗೆ ಕಾರಣ ಕೊಟ್ಟ ಅವರು, ಮುಂದಿನ ದಿನಗಳಲ್ಲಿ ಈ ಹಿಂದುತ್ವ ಅನ್ನೋದು ಕೇವಲ ಚುನಾವಣೆಯ ನಾಟಕವೋ ಅಥವಾ ಹಿಂದೂ ಭಾವನೆಗಳಿಗೆ ಬೆಲೆ ಕೊಡುವ ರೀತಿಯಲ್ಲಿ ನಡೆದುಕೊಳ್ಳುತ್ತಾ ಅನ್ನೋದನ್ನು ಕಾದು ನೋಡುವ ಅವಶ್ಯಕತೆ ಇದೆ ಅಂತ ಹೇಳಿದ್ರು.

ಒಟ್ಟಾರೆಯಾಗಿ ಜನ ಏನ್ ಕೊಟ್ಟಿದ್ದಾರೋ ಅದು ನಮಗೆ ಎಚ್ಚರಿಕೆಯ ಗಂಟೆಯಾಗಿದೆ. 2019ರ ಚುನಾವಣೆಯನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳಲು ಹಾಗೂ ಎಚ್ಚರದಿಂದ ನಡೆಯಲು ಜನ ತೀರ್ಪು ಕೊಟ್ಟಿದ್ದಾರೆ ಅಂತ ತಿಳಿಸಿದ್ರು.

ಚುನಾವಣಾ ಫಲಿತಾಂಶದ ಆರಂಭಿಕ ಮುನ್ನಡೆ ಬಿಜೆಪಿಗೆ ನಿರೀಕ್ಷೆಯಂತೆ ಆಗಿಲ್ಲ. ನಾನು ಇವಿಎಂ ಯಂತ್ರದ ಮೇಲೆ ದೋಷ ಹೊರಿಸುವುದಿಲ್ಲ. ಜನರು ಕೊಟ್ಟ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಹಾಗೆಯೇ ಗೌರವಿಸುತ್ತೇವೆ ಅಂದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *