ಸಿದ್ದರಾಮಯ್ಯ ಇಂಗು ತಿಂದ ಮಂಗನಂತೆ ಆಡ್ತಿದ್ದಾರೆ – ಸಿ.ಟಿ ರವಿ ವ್ಯಂಗ್ಯ

ಬೆಂಗಳೂರು: ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗನಿಂದಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಗು ತಿಂದ ಮಂಗನಂತೆ ಆಡುತ್ತಿದ್ದಾರೆ. ಅವರಿಗೆ ಅಧಿಕಾರ ಸಿಗದೇ ಹೀಗೆ ಆಡುತ್ತಾ ಇದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಅವರು ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಆಪ್ತರು ಪದೇ ಪದೇ ಇಂಗು ತಿಂದ ಮಂಗನಂತೆ ಆಡುತ್ತಿರುವುದನ್ನು ಸಮಾಧಾನ ಮಾಡಲು ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ ಅಂದ್ರು.

ಬಜೆಟ್ ದಿನ ಬಿಜೆಪಿ ಪ್ರತಿಭಟನೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ನಾಯಕರು ತೀರ್ಮಾನ ಕೈಗೊಳ್ತಾರೆ. ಅದಕ್ಕೆ ತಕ್ಕ ಹಾಗೇ ನಾವು ನಡೆದುಕೊಳ್ತೀವಿ. ಸರ್ಕಾರದ ಈ ಸುತ್ತೋಲೆಯನ್ನ ನೋಡಿದ್ದಿವಿ. ಲೋಕಸಭಾ ಮಾದರಿ ಎಂದಿರುವ ಹಿನ್ನೆಲೆಯಲ್ಲಿ ಮಾತುಕತೆ ಮಾಡಿ ತೀರ್ಮಾನ ಕೈಗೊಳ್ತಿವಿ ಎಂದು ತಿಳಿಸಿದ್ರು.

ದಾಖಲೆ ಇದ್ರೆ ಬಿಡುಗಡೆ ಮಾಡಿ:
ಸುಮ್ನೆ ಆರೋಪ ಮಾಡುವುದು ಬೇಡ. ದಾಖಲೆ ಇದ್ರೆ ಬಿಡುಗಡೆ ಮಾಡಿ. ಸಿದ್ದರಾಮಯ್ಯನವರು 30-40 ಕೋಟಿ ರೂ. ತಂದಿಟ್ಟಿದ್ದಾರೆ ಎಂದು ಆಪಾದನೆ ಮಾಡುತ್ತಿದ್ದಾರೆ. ಅವರು ಓರ್ವ ಕ್ರಿಮಿನಲ್ ವಕೀಲರು. ಈ ರೀತಿಯಾದ್ರೆ ಏನ್ ಮಾಡಬೇಕೆಂದು ಕ್ರಿಮಿನಲ್ ಲಾಯರ್‍ಗೆ ಗೊತ್ತಿಲ್ಲ ಅಂದ್ರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಅವರ ನಿಲುವೇ ಸ್ಪಷ್ಟಪಡಿಸುತ್ತದೆ ಅಂದ್ರು.

ಒಂದೇ ವೇಳೆ 30-40 ಕೋಟಿ ಕೊಟ್ಟಿದ್ದಿದ್ದರೆ ಸಾಕ್ಷಿ ಸಮೇತ ಅದನ್ನು ಪ್ರೂವ್ ಮಾಡುತ್ತಿದ್ದರು. ಆದ್ರೆ ಅವರು ಕೇವಲ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಪಕ್ಷದ ಒಳಜಗಳವನ್ನು ಹದ್ದುಬಸ್ತಿನಲ್ಲಿಡಲಾಗಿದೆ. ಅವರ ಪಕ್ಷದಲ್ಲಿನ ಭಿನ್ನಮತೀಯರನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಗರಂ ಆದ್ರು.

ನವದೆಹಲಿಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಅವರು ಬಿಜೆಪಿ ಮೇಲೆ ಆರೋಪಗಳ ಸುರಿಮಳೆಗೈದಿದ್ದು, ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಆದ್ರೆ ಅದ್ಯಾವಾಗ ಸೂಕ್ತ ಸಮಯ ಬರುತ್ತದೆ ಎಂದು ನನಗೆ ಗೊತ್ತಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *