ಮತ್ತೆ ಕೈ ಶಾಸಕ ಬೈರತಿ ಬಸವರಾಜ್ ಬೆಂಬಲಿಗರ ಗುಂಡಾಗಿರಿ- ಈಗ ಟ್ರಾಫಿಕ್ ಪೊಲೀಸ್ ಪೇದೆ ಮೇಲೆ ಹಲ್ಲೆ

ಬೆಂಗಳೂರು: ಕೆಆರ್ ಪುರಂ ಕಾಂಗ್ರೆಸ್ ಶಾಸಕ ಭೈರತಿ ಬಸವರಾಜ್ ಬಂಟ ಪೆಟ್ರೋಲ್ ನಾರಾಯಣನ ಗೂಂಡಾವರ್ತನೆಯ ಸುದ್ದಿ ಪ್ರಕಟವಾಗಿ ಒಂದು ದಿನ ಕಳೆಯುವಷ್ಟರಲ್ಲೇ ಅವರ ಮತ್ತೊಬ್ಬ ಬೆಂಬಲಿಗ ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.

ಇಂದು ಬೆಳಗ್ಗೆ ಕೆಆರ್ ಪುರಂ ಭಟ್ಟರಹಳ್ಳಿ ಗೇಟ್ ಬಳಿ ಶಾಸಕರ ಬೆಂಬಲಿಗ ಮುಕುಂದ್ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಕುರಿತ ವಿಡಿಯೋವನ್ನು ಮಾಜಿ ಶಾಸಕ ನಂದೀಶ್ ರೆಡ್ಡಿ ಅವರು ವಿಧಾನಸೌಧಲ್ಲಿ ಬಿಡುಗಡೆಗೊಳಿಸಿ ಆರೋಪ ಮಾಡಿದ್ದಾರೆ.

ಇಂದು ಮುಂಜಾನೆ ಕೆಆರ್ ಪುರಂನ ಭಟ್ಟರಹಳ್ಳಿ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಬೈಕ್ ನಲ್ಲಿ ತೆರಳುತ್ತಿದ್ದ ಮುಕುಂದ್ ಹಾಗೂ ಆತನ ಸ್ನೇಹಿತರನ್ನು ಅಡ್ಡಗಡ್ಡಿದ್ದಾರೆ. ಈ ವೇಳೆ ಮುಕುಂದ್ ಹಾಗೂ ಆತನ ಸ್ನೇಹಿತ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ ಸಮವಸ್ತ್ರವನ್ನು ಹರಿದು ಹಾಕಿದ್ದಾನೆ ಎಂದು ನಂದೀಶ್ ರೆಡ್ಡಿ ಹೇಳಿದ್ದಾರೆ.

https://www.youtube.com/watch?v=SXZ5lMWHo-w

https://www.youtube.com/watch?v=NiJf6PUT3Yo

 

Comments

Leave a Reply

Your email address will not be published. Required fields are marked *