ಟ್ಯಾಗ್ ಮಾಡದೇ ಹೆಸರು ಬರೆದು ಟಾಂಗ್ ಕೊಟ್ಟ ಕಾಂಗ್ರೆಸ್‍ಗೆ ಯತ್ನಾಳ್ ತಿರುಗೇಟು

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ (Congress Guarantee) ಯೋಜನೆಗಳ ಜಟಾಪಟಿ ನಡುವೆ ಬಿಜೆಪಿಯ (BJP Notice) ಶಿಸ್ತು ಸಮಿತಿ ನೋಟಿಸ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಸಂಬಂಧ ಹೆಸರು ಬರೆದು ಟಾಂಗ್ ಕೊಟ್ಟ ಕಾಂಗ್ರೆಸ್‍ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತಿರುಗೇಟು ನೀಡಿದ್ದಾರೆ.

ಹೌದು. ಶಿಸ್ತುಕ್ರಮದ ಕುರಿತು ಬರೆಯುತ್ತಾ ಪ್ರತಾಪ್ ಸಿಂಹ (Pratap Simha) ಅವರನ್ನು ಟ್ಯಾಗ್ ಮಾಡಿ ಯತ್ನಾಳ್ ಅವರನ್ನು ಟ್ಯಾಗ್ ಮಾಡದೇ ಅವರ ಹೆಸರನ್ನು ಕಾಂಗ್ರೆಸ್ ಬರೆದುಕೊಂಡಿದೆ. ಈ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಯತ್ನಾಳ್, ನನ್ನನ್ನು ಟ್ಯಾಗ್ ಮಾಡಿದ್ರೆ ಜಾಡಿಸ್ತೀನಿ ಅಂತ, ಹೆಸರು ಬರೆದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಟ್ವೀಟ್‍ನಲ್ಲೇನಿದೆ..?: ಬಿಜೆಪಿಯಲ್ಲಿ ಶಿಸ್ತಿನ ಪಾಠ ಕೇವಲ ಬಿಎಸ್‍ವೈ ಬ್ರಿಗೇಡ್‍ಗೆ ಮಾತ್ರವೇ?. ಬೊಮ್ಮಾಯಿಯವರ ವಿರುದ್ಧ ಮಾತನಾಡಿದ ಪ್ರತಾಪ್ ಸಿಂಹರಿಗೆ ಶಿಸ್ತುಕ್ರಮದ ನೋಟಿಸ್ ಇಲ್ಲ. ಬಿಎಸ್‍ವೈ ವಿರುದ್ಧ ಅಬ್ಬರಿಸಿದ್ದ ಯತ್ನಾಳರಿಗೆ ನೋಟಿಸ್ ಇಲ್ಲ. ನಿರಾಣಿ ವಿರುದ್ಧ ಮಾತನಾಡಿದವರಿಗೆ ನೋಟಿಸ್ ಇಲ್ಲ.

ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವವನ್ನು ಹಾಗೂ ಬಿಎಸ್‍ವೈ (B S Yediyurappa) ಬೆಂಬಲಿಗರನ್ನು ಸಂಪೂರ್ಣ ಮುಗಿಸಿಹಾಕಲು ಸಂತೋಷ ಕೂಟ ಪಣ ತೊಟ್ಟಿದೆ ಎಂದು ಬರೆದು ಬಿಎಸ್‍ವೈ ಹಾಗೂ ಪ್ರತಾಪ್ ಸಿಂಹಗೆ ಕಾಂಗ್ರೆಸ್ ಟ್ಯಾಗ್ ಮಾಡಿದೆ.

ಯತ್ನಾಳ್ ತಿರುಗೇಟು: ನಮ್ಮ ಪಕ್ಷದ ಆಂತರಿಕ ವಿಚಾರ ನಿಮಗೆ ಏನು ಸಂಬಂಧ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ನಮ್ಮಲ್ಲಿ “Internal Democracy” ಇದೆ, Dont Disturb ಅಂತ ಗದರಿಸುವ ಸಂಸ್ಕೃತಿ ಇಲ್ಲ. ನನ್ನನ್ನು ಟ್ಯಾಗ್ ಮಾಡಿದ್ರೆ ಜಾಡಿಸ್ತೀನಿ ಅಂತ, ಹೆಸರು ಬರೆದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ. ನಿಮ್ಮ ಮಹದೇವಪ್ಪನಿಗೆ, ಕಾಕಪಾಟಿಲನಿಗೆ ಕೊಟ್ಟಿದ್ದ ಮಾತು ಪೂರೈಸಲು ಕೆಲಸ ಮಾಡಿ ಎಂದು ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]