ಕೆಲಸಕ್ಕೆ ಬಾರದವರನ್ನ ಸಿಎಂ ಮಾಡಿದರೆ ಮುಗಿದೋಯ್ತು: ಯತ್ನಾಳ್

ಬೆಳಗಾವಿ: ಕೆಲಸಕ್ಕೆ ಬಾರದವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಮುಗಿದೋಯ್ತು. ಪ್ರಾಮಾಣಿಕ ನಿರ್ಣಯ ತೆಗೆದುಕೊಳ್ಳುವವರಾಗಬೇಕು. ಬಾಲಂಗೋಚಿಗಳಿಗೆ ಕೊಟ್ಟರೆ ಕಷ್ಟ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಸಿಎಂ ಭಾವನಾತ್ಮಕ ಭಾಷಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹೇಳಿದ ಭವಿಷ್ಯ ಸುಳ್ಳಾಗಿಲ್ಲ. ಅಧಿಕಾರ ಶಾಶ್ವತ ಅಲ್ಲ ಅಂತಾ ಅವರು ಹೇಳಿದ್ದಾರೆ. ಅದು ಸಹಜವಾಗಿ ಬಂದ ಮಾತು, ಬದಲಾವಣೆ ಅನ್ನೋದು ಸಹಜ. ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಸಿಎಂ ಬಿಟ್ಟು ಹೊಸ ವ್ಯವಸ್ಥೆ ಬರುತ್ತದೆ ಎಂದರು.

ಇದೇ ವೇಳೆ ಯತ್ನಾಳ್ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ಕೊಟ್ಟು ಸಿಎಂ ಮಾಡಿದರೆ ನಾನು ತೋರಿಸ್ತೇನೆ. ಕೆಲಸಕ್ಕೆ ಬಾರದವರನ್ನ ಮಾಡಿದರೆ ಮುಗಿದೋಯ್ತು. ಪ್ರಾಮಾಣಿಕ ನಿರ್ಣಯ ತೆಗೆದುಕೊಳ್ಳವವರಾಗಬೇಕು. ಬಾಲಂಗೋಚಿಗಳಿಗೆ ಕೊಟ್ಟರೆ ಕಷ್ಟ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಭಾವುಕ ಭಾಷಣಕ್ಕೆ ಸಿ.ಎಂ ಇಬ್ರಾಹಿಂ ಲೇವಡಿ

ಎಂಇಎಸ್ ಒಂದು ಗೂಂಡಾ ಸಂಸ್ಕೃತಿ ಇರುವಂತದ್ದು. ಎಂಇಎಸ್ ಬಗ್ಗೆ ಮರಾಠ ಸಮುದಾಯವೂ ಒಪ್ಪಲ್ಲ. ಎಂಇಎಸ್ ಬೇರೆ, ಮರಾಠ ಸಮುದಾಯವೇ ಬೇರೆ. ಹಿಂದೆ ಐವರು ಎಂಇಎಸ್ ನವರು ಇಲ್ಲಿದ್ದರು. ಈಗ ಒಬ್ಬರೂ ಇಲ್ಲಿ ಅಧಿಕಾರದಲ್ಲಿಲ್ಲ. ಮರಾಠ ಸಮುದಾಯವೇ ಅವರನ್ನ ತಿರಸ್ಕರಿಸಿದೆ. ಎಂಇಎಸ್ ಬ್ಯಾನ್ ಮಾಡುವುದು ಕಾನೂನಿಗೆ ಸಂಬಂಧಿಸಿದ ವಿಚಾರ. ಅದಕ್ಕೆ ಕಾನೂನಿಡಿ ಪರಿಶೀಲಿಸಬೇಕಾಗುತ್ತದೆ ಎಂದು ಯತ್ನಾಳ್ ತಿಳಿಸಿದರು.

Comments

Leave a Reply

Your email address will not be published. Required fields are marked *