ಮತ ಸಮರಕ್ಕೆ ಮುನ್ನ ಪಕ್ಷಾಂತರ ಪರ್ವ ಜೋರು- ಬಿಜೆಪಿಗೆ ಗುಡ್‍ಬೈ ಹೇಳಲು ಆನಂದ್ ಸಿಂಗ್ ನಿರ್ಧಾರ

ಬಳ್ಳಾರಿ: ಮತ ಸಮರ ಘೋಷಣೆಗೆ ಮುನ್ನ ಪಕ್ಷಾಂತರ ಪರ್ವ ಜೋರಾಗಿದೆ. ಜೆಡಿಎಸ್‍ನ ಇಬ್ಬರು ಶಾಸಕರು ಬಿಜೆಪಿ ಸೇರಿದ ಬೆನ್ನಲ್ಲೇ ಇದೀಗ ಹೊಸಪೇಟೆ ಶಾಸಕ ಆನಂದ್ ಸಿಂಗ್ ಬಿಜೆಪಿ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ.

ಬಿಜೆಪಿ ತೊರೆಯುವುದಾಗಿ ಘೋಷಣೆ ಮಾಡಿದ ಅವರು, ಬಿಜೆಪಿಯ ನಾಯಕರು ನನಗೆ ಸರಿಯಾಗಿ ಸ್ಪಂದನೆ ಮಾಡದ ಪರಿಣಾಮ ಮನನೊಂದು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಒದಿ: ಸ್ವಪಕ್ಷದ ವಿರುದ್ಧವೇ ಶಾಸಕರ ಮುನಿಸು- ಆನಂದ್ ಸಿಂಗ್ ಅನುಪಸ್ಥಿತಿಯಲ್ಲೇ ಪರಿವರ್ತನಾ ಯಾತ್ರೆಗೆ ಸಿದ್ಧತೆ

ನಾನು ಬೆಂಕಿ ಹಚ್ಚೋರ ಜೊತೆ ಇರಲ್ಲ. ಬೆಂಕಿ ಆರಿಸುವವರ ಜೊತೆ ಇರುವೆ. ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದೇ ಬಹುದೊಡ್ಡ ಅಪರಾಧ ಎನ್ನುವಂತೆ ಬಿಜೆಪಿ ಪರಿಗಣಿಸಿದ್ದು, ಬೇಸರ ತರಿಸಿತು ಎಂದಿದ್ದಾರೆ. ಈ ಕುರಿತು ಸ್ಪೀಕರ್‍ಗೆ ರಾಜೀನಾಮೆ ನೀಡಿ, ಬಳಿಕ ಯಾವ ಪಕ್ಷಕ್ಕೆ ಹೋಗಬೇಕು ಅನ್ನೋದನ್ನ ಬಹಿರಂಗಪಡಿಸುತ್ತೇನೆಂದು ಶಾಸಕರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಆದ್ರೆ, ಮೂಲಗಳ ಪ್ರಕಾರ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ. ಇದನ್ನೂ ಓದಿ:  ಶಾಸಕ ಆನಂದ್ ಸಿಂಗ್‍ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್

Comments

Leave a Reply

Your email address will not be published. Required fields are marked *