ನಾಪತ್ತೆಯಾಗಿದ್ದ ದಲಿತ ಮಹಿಳೆ ಶವವಾಗಿ ಹೂತಿಟ್ಟ ಸ್ಥಿತಿಯಲ್ಲಿ ಮಾಜಿ ಸಚಿವನ ಆಶ್ರಮದ ಬಳಿ ಪತ್ತೆ!

ಲಕ್ನೋ: ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ 22 ವರ್ಷ ವಯಸ್ಸಿನ ದಲಿತ ಮಹಿಳೆ ಶವವು ಸಮಾಧಿಯಾಗಿದ್ದ ಸ್ಥಿತಿಯಲ್ಲಿ ಸಮಾಜವಾದಿ ಪಕ್ಷದ ಮಾಜಿ ಸಚಿವನ ಆಶ್ರಮದ ಬಳಿ ಪತ್ತೆಯಾಗಿದೆ.

ಉತ್ತರ ಪ್ರದೇಶದ ಉನ್ನಾವೊದ ದಲಿತ ಮಹಿಳೆ ನಾಪತ್ತೆಯಾಗಿದ್ದರು. ಹೂತಿಟ್ಟಿದ್ದ ಕೊಳೆತ ಸ್ಥಿತಿಯಲ್ಲಿದ್ದ ಆಕೆಯ ಮೃತದೇಹವನ್ನು, ಮಾಜಿ ಸಚಿವ ಫತೇಹ್‌ ಬಹದ್ದೂರ್‌ ಸಿಂಗ್‌ ನಿರ್ಮಿಸಿರುವ ಆಶ್ರಮದ ಬಳಿಯ ಖಾಲಿ ಜಾಗದಿಂದ ಹೊರತೆಗೆದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜಿಗೆ ಬೆಂಗಳೂರು ಸಜ್ಜು – ಸ್ಟಾರ್ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು

ಫತೇಹ್‌ ಬಹದ್ದೂರ್‌ ಪುತ್ರ ರಾಜೋಲ್‌ ಸಿಂಗ್‌ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರಾಜೋಲ್‌ ಸಿಂಗ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ನಂತರ ಎಸ್‌ಒಜಿ ತಂಡ ಗುರುವಾರ ಮಹಿಳೆಯ ದೇಹವನ್ನು ಹೊರತೆಗೆದಿದೆ. ಮೃತದೇಹವನ್ನು ಆಶ್ರಮದ ಬಳಿಯ ಜಾಗದಲ್ಲಿ ಹೂಳಲಾಗಿತ್ತು. ಶವವನ್ನು ಹೂತಿಟ್ಟ ಸ್ಥಳವನ್ನು ಗುರುತಿಸಲು ನಾವು ಗುಪ್ತಚರ ಮತ್ತು ಮೊಬೈಲ್‌ ಕಣ್ಗಾವಲು ಬಳಸಿದ್ದೇವೆ ಎಂದು ಉನ್ನಾವೊ ಎಎಸ್‌ಪಿ ಶಶಿ ಶೇಖರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

ಅಕ್ರಮ ಸಂಬಂಧ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

POLICE JEEP

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಪ್ರಕರಣ ಕುರಿತು ಪ್ರತಿಕ್ರಿಯಿಸಿದ್ದು, ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ತಪ್ಪಿತಸ್ಥರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಾವು ಕಬ್ಬಿನ ಬಗ್ಗೆ ಮಾತಾಡಿದ್ರೆ, ಅವ್ರು ಜಿನ್ನಾ ಕುರಿತು ಮಾತನಾಡ್ತಾರೆ: ಕಾಂಗ್ರೆಸ್‌ ವಿರುದ್ಧ ಯೋಗಿ ವಾಗ್ದಾಳಿ

ಡಿ.8 ರಂದು ಮಹಿಳೆ ಕಾಣೆಯಾಗಿದ್ದರು. ನನ್ನ ಮಗಳನ್ನು ಮಾಜಿ ಸಚಿವರ ಮಗ ರಾಜೋಲ್‌ ಸಿಂಗ್‌ ಅಪಹರಣ ಮಾಡಿದ್ದಾನೆ ಎಂದು ಮಹಿಳೆ ತಾಯಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

Comments

Leave a Reply

Your email address will not be published. Required fields are marked *