ತನ್ನ ವ್ಯಾಲಂಟೈನ್ ಯಾರು ಎಂಬುದನ್ನು ಹೇಳಿದ ವಿಶ್ವಸುಂದರಿ ಮಾನುಷಿ ಚಿಲ್ಲರ್!

ಮುಂಬೈ: ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡು ಇಡೀ ದೇಶ ಹಮ್ಮೆಪಡುವಂತೆ ಮಾಡಿದ್ದ ಮಾನುಷಿ ಚಿಲ್ಲರ್ ತಮ್ಮ ವ್ಯಾಲಂಟೈನ್ ಯಾರು ಎಂಬುದನ್ನು ಪ್ರಕಟಿಸಿದ್ದಾರೆ.

ತನ್ನ ಮೊದಲ ವ್ಯಾಲಂಟೈನ್ ನನ್ನ ತಾಯಿ ಎಂದು ತಮ್ಮ ತಾಯಿ ಜೊತೆಯಲ್ಲಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾನುಷಿ ತಮ್ಮ ತಾಯಿಯ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, ‘Happy Valentine’s Day to my constant’. ಪ್ರತಿ ವರ್ಷ ವ್ಯಾಲಂಟೈನ್ ಗೆ ನಾನು ಹಾಗೂ ನನ್ನ ತಾಯಿ ಒಬ್ಬರಿಗೊಬ್ಬರು ವಿಶ್ ಮಾಡುತ್ತೇವೆ. ಫೆ.14 ರಂದು ನನಗೆ ಚಾಕಲೇಟ್ಸ್ ಹಾಗೂ ಗುಲಾಬಿ ಹೂಗಳು ಸಿಕ್ಕುತ್ತಿರುವುದು ನನಗೆ ನೆನಪಿದೆ. ನಾನು ಮನೆಗೆ ಬಂದ ತಕ್ಷಣ ಅದನ್ನು ನನ್ನ ತಾಯಿಗೆ ಕೊಟ್ಟು ನೀನು ನನ್ನ ಮೊದಲ ವ್ಯಾಲಂಟೈನ್ ಎಂದು ಹೇಳುತ್ತಿದ್ದೆ. ಅತ್ಯಂತ ಸುಂದರ ಹಾಗೂ ಸಹಾನುಭೂತಿ ಮಹಿಳೆ ಆಗಿ ನೀನು ಇರುವುದಕ್ಕೆ ನನ್ನ ಧನ್ಯವಾದಗಳು ಎಂದು ಬರೆದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾನುಷಿ ಚಿಲ್ಲರ್ 2017ರಲ್ಲಿ ಚೀನಾದ ಸನ್ಯ ಸಿಟಿಯಲ್ಲಿ ವಿಶ್ವ ಸುಂದರಿ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. 2000ರಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. 17 ವರ್ಷಗಳ ನಂತರ ಮಾನುಷಿ ಮತ್ತೆ ವಿಶ್ವಸುಂದರಿ ಸ್ಪರ್ಧೆ ಗೆದ್ದು ಭಾರತಕ್ಕೆ ಹಮ್ಮೆ ಆಗುವಂತೆ ಮಾಡಿದ್ದಾರೆ.

ವಿಶ್ವಸುಂದರಿ ಸ್ಪರ್ಧೆಯ ಟಾಪ್ 5 ಸ್ಥಾನಕ್ಕೆ ತಲುಪಿದಾಗ ಪ್ರಶ್ನೋತ್ತರ ಸುತ್ತಿನಲ್ಲಿ ಮಾನುಷಿ ಅವರಿಗೆ, ಅತಿ ಹೆಚ್ಚು ಸಂಬಳ ನೀಡುವ ಯಾವ ವೃತ್ತಿಗೆ ನೀವು ಅರ್ಹರು ಮತ್ತು ಯಾಕೆ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ವೇಳೆ ಸಂಬಳ ಯಾವುದೇ ವೃತ್ತಿಯ ಗೌರವವನ್ನು ನಿರ್ಧರಿಸುವುದಿಲ್ಲ. ತಾಯಿಯಾಗುವ ವೃತ್ತಿ ಮಹಿಳೆಯ ಜೀವನದಲ್ಲಿ ದೊರೆಯುವ ಅತ್ಯಂತ ಗೌರವಯುತವಾದ ಹುದ್ದೆಯಾಗಿದೆ. ಕೇವಲ ಹಣದಿಂದ ಮಾತ್ರ ಪ್ರೀತಿ ಮತ್ತು ಗೌರವ ಸಿಗುತ್ತದೆ ಎಂಬ ವಿಚಾರದಲ್ಲಿ ನನಗೆ ನಂಬಿಕೆಯಿಲ್ಲ. ನನ್ನ ತಾಯಿ ನನಗೆ ಜೀವನದ ಅತಿ ದೊಡ್ಡ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಹಾಗಾಗಿ ತಾಯಿಯಾಗುವ ವೃತ್ತಿ ಜಗತ್ತಿನಲ್ಲಿ ಅತ್ಯಂತ ಗೌರವಯುತವಾದದ್ದು ಎಂದು ಮಾನುಷಿ ಭಾವನಾತ್ಮಕವಾಗಿ ಉತ್ತರಿಸಿದ್ದರು.

ನವೆಂಬರ್ 18, 2018ರಲ್ಲಿ ವಿಶ್ವಸುಂದರಿ ಸ್ಪರ್ಧೆ ಗೆದ್ದು ಮಾನುಷಿ ಭಾರತದ 6ನೇ ವಿಶ್ವಸುಂದರಿ ಆಗಿದ್ದಾರೆ. ಅಷ್ಟೇ ಅಲ್ಲದೇ ಏಸ್ ಫೋಟೋಗ್ರಾಫರ್ ಆದ ಡಾಬೋ ರತ್ನಾನಿ ನಡೆಸಿದ 2018ರ ಕ್ಯಾಲೆಂಡರ್ ಫೋಟೋಶೂಟ್‍ನಲ್ಲಿ ಮಾನುಷಿ ಕೂಡ ಪಾಲ್ಗೊಂಡಿದ್ದರು. ಆ ಫೋಟೋಶೂಟ್‍ನಲ್ಲಿ ನಟ ಅಮಿತಾಬ್ ಬಚ್ಚನ್, ಶಾರೂಕ್ ಖಾನ್, ಐಶರ್ಯ ರೈ ಬಚ್ಚನ್, ಅಲಿಯಾ ಭಟ್, ಶ್ರದ್ಧ ಕಪೂರ್, ಫರಾನ್ ಅಖ್ತರ್ ಹಾಗೂ ಅರ್ಜುನ್ ರಾಮ್‍ಪಾಲ್ ಕೂಡ ಫೋಟೋಶೂಟ್ ಮಾಡಿಸಿದ್ದರು. ಇದ್ನನೂ ಓದಿ: ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಮೊದಲು ಡ್ಯಾನ್ಸ್ ಸ್ಟೆಪ್ ಕಲಿತಿದ್ದು ಬೆಂಗ್ಳೂರಿನಲ್ಲಿ!

Comments

Leave a Reply

Your email address will not be published. Required fields are marked *