ಬ್ಯಾಕ್ ಬ್ಯೂಟಿಗೆ 13 ಕೋಟಿ ಇನ್ಶೂರೆನ್ಸ್ ಮಾಡಿಸಿದ Miss Bumbum 2021

ಮುಂಬೈ: ಮನೆ, ಕಾರಿಗೆ ಇನ್ಶೂರೆನ್ಸ್ ಮಾಡುವುದನ್ನು ಕೇಳಿದ್ದೇವೆ. ಆದರೆ ಮಿಸ್ ಬಮ್‍ಬಮ್ 2021 ನಥಿ ಕಿಹರಾ ಬ್ಯಾಕ್ ಬ್ಯೂಟಿಗೆ 13 ಕೋಟಿ ಇನ್ಶೂರೆನ್ಸ್ ಮಾಡಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

35 ವರ್ಷ ವಯಸ್ಸಿನ ನಥಿ ಕಿಹರಾ ಬ್ರೆಜಿಲಿಯನ್ ಮಾಡೆಲ್ ಆಗಿದ್ದಾರೆ. ಈಕೆ ಮಗುವಿಗೆ ಜನ್ಮ ನೀಡಿದ ನಾಲ್ಕು ತಿಂಗಳ ನಂತರ ಅತ್ಯಂತ ಕಿರಿಯ ಬಂಬಮ್ ವಲ್ರ್ಡ್ ಸುಂದರಿ ಎಂದು ಆಯ್ಕೆಯಾಗಿದ್ದಾರೆ. 1.3 ಮಿಲಿಯನ್ ಪೌಂಡ್ (ಅಂದಾಜು ರೂ 13 ಕೋಟಿ)ಗೆ ವಿಮೆ ಮಾಡಿದ್ದಾರೆ. ಇದನ್ನೂ ಓದಿ:   ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?

Nathy Kihara

ನನ್ನ ಪೃಷ್ಠದ ಕಾರಣದಿಂದ ನಾನು ಪ್ರಸಿದ್ಧಳಾಗಿದ್ದೇನೆ. ಇದು ಬ್ರೆಜಿಲ್‍ನಲ್ಲಿ ಅತಿ ದೊಡ್ಡದಾಗಿದೆ. ಆದ್ದರಿಂದ ಅದನ್ನು ವಿಮೆಗೆ ಹಾಕುವುದು ನ್ಯಾಯೋಚಿತವಾಗಿದೆ. ನನ್ನ ಹಿಂಬದಿಯ ಗಾತ್ರದಿಂದ ತನಗೆ ಇನ್ನೂ ತೃಪ್ತಿಯಿಲ್ಲ. ಹೆಚ್ಚಿನ ವ್ಯಾಯಾಮ ಮಾಡುವ ಮೂಲಕ ಅದನ್ನು ಹೆಚ್ಚಿಸುವ ಯೋಜನೆ ಇದೆ. 126 ಸೆಂಟಿಮೀಟರ್ ಹಿಂದೆ ಇದೆ. ಆದರೆ ಸದ್ಯದ ಗುರಿಯು 130 ಸೆಂ.ಮೀ ಅನ್ನು ಹೊಂದುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ:  ಪ್ರಿಯತಮನನ್ನು ಪರಿಚಯಿಸಿದ ನಟಿ ಕಾವ್ಯ ಗೌಡ

ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಒಂಬತ್ತು ವರ್ಷದ ಹುಡುಗ ಮತ್ತು ಈ ವರ್ಷದ ಆರಂಭದಲ್ಲಿ ಅವರ ಮಗಳು ಜನಿಸಿದ್ದಾಳೆ. ಪ್ರಪಂಚದಾದ್ಯಂತ ಸ್ವಾಭಿಮಾನದ ಸಮಸ್ಯೆಗಳಿಂದ ಬಳಲುತ್ತಿರುವ ಅನೇಕ ಅಮ್ಮಂದಿರನ್ನು ಪ್ರತಿನಿಧಿಸಲು ಮತ್ತು ಪೆÇ್ರೀತ್ಸಾಹಿಸಲು ಸಾಧ್ಯವಾಗಿರುವುದಕ್ಕೆ ನನಗೆ ಗೌರವವಿದೆ. ನನ್ನ ಪೃಷ್ಠವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ನನ್ನ ದೇಹವನ್ನು ಕಾಪಾಡಿಕೊಳ್ಳಲು ನಾನು ಸಾಕಷ್ಟು ತರಬೇತಿ ನೀಡುತ್ತೆನೆ. ತಾಯ್ತನದ ನಂತರ ಜಿಮ್‍ನಲ್ಲಿ ತೂಕ, ಆಹಾರದ ಮೇಲೆ ಹೆಚ್ಚು ಗಮನ ಹರಿಸಲು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *