ಮಹಿಳಾ ಟೆಕ್ಕಿಗೆ ಮೈ-ಕೈ ಮುಟ್ಟಿ ಲೈಂಗಿಕ ದೌರ್ಜನ್ಯ- ಬೆಂಗಳೂರು ಪೊಲೀಸ್ ಯುಸ್ ಲೆಸ್ ಎಂದ ಟೆಕ್ಕಿಗಳು!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಬೀದಿ ಕಾಮಣ್ಣರ ಹಾವಳಿ ಮುಂದುವರೆದಿದೆ. ಬೆಂಗಳೂರಿನ ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲಿ ಹೀನಾಯ ಕೃತ್ಯವೊಂದು ನಡೆದಿದೆ.

ಯುವತಿಯೊಬ್ಬಳಿಗೆ 4 ಜನ ಬೀದಿ ಕಾಮಣ್ಣರು ಮೈ ಕೈ ಮುಟ್ಟುವ ಮೂಲಕ ಅಸಭ್ಯ ವರ್ತನೆಯನ್ನು ತೋರಿದ್ದಾರೆ. ಇನ್ನೂ ಮಹಿಳಾ ಟೆಕ್ಕಿ ಜೊತೆ ಅಸಭ್ಯ ವರ್ತನೆ ತೋರಿದ ಯುವಕನಿಗೆ ಯುವತಿ ಕಪಾಳ ಮೋಕ್ಷವನ್ನು ಮಾಡಿದ್ದಾರೆ.

ಇದರಿಂದ ಕೆರಳಿದ ಪುಂಡರು ಟೆಕ್ಕಿ ಸಹದ್ಯೋಗಿಗಳ ಜೊತೆ ಗುಂಡಾವರ್ತನೆಯನ್ನು ತೋರಿದ್ದಾರೆ. ಕಾಮುಕರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಸಹ ಜೀವನ್‍ಭೀಮಾ ನಗರ ಪೊಲೀಸರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬರಲಿಲ್ಲ.

ಸ್ಥಳಕ್ಕೆ ಬರದೇ ಇರುವುದರ ಬಗ್ಗೆಯೂ ಸಹ ಫೇಸ್ ಬುಕ್‍ನಲ್ಲಿ ಪೊಲೀಸರ ವಿರುದ್ಧ ಸಾಫ್ಟ್ ವೇರ್ ಎಂಜಿನಿಯರ್ ಗಳು “ಬೆಂಗಳೂರು ಪೊಲೀಸರು ಯುಸ್‍ಲೆಸ್” ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *