ಬಂಡೆಯಲ್ಲಿ ಕ್ವಾರಿ ನಡೆಸಲು ಕಾಡಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

ಶಿವಮೊಗ್ಗ: ಚಾಮರಾಜನಗರ ಜಿಲ್ಲೆಯ ಬಂಡೀಪುರಕ್ಕೆ ಗ್ರಾಮಸ್ಥರು ಬೆಂಕಿ ಹಚ್ಚಿದ ಬೆನ್ನಲ್ಲೇ ಇದೀಗ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಲ್ಲಿ ದುಷ್ಕರ್ಮಿಗಳು ಕಾಡಿಗೆ ಬೆಂಕಿ ಇಟ್ಟ ಘಟನೆಯೊಂದು ಬೆಳಕಿಗೆ ಬಂದಿದೆ.

ಬಿದರಗೋಡು ಗ್ರಾ.ಪಂ. ವ್ಯಾಪ್ತಿಯ ಸರ್ವೆ ನಂಬರ್ 172ರಲ್ಲಿ ಸುಮಾರು 25 ಎಕ್ರೆ ಕಿರು ಅರಣ್ಯ ನಾಶ ಮಾಡಿದ್ದಾರೆ. ದುಷ್ಕರ್ಮಿಗಳು ಹಿಟಾಚಿಯಂತಹ ದೈತ್ಯ ಯಂತ್ರ ಬಳಸಿ ಮರ-ಗಿಡ ನಾಶ ಮಾಡಿ ನೆಲಸಮ ಮಾಡಿದ್ದಾರೆ. ಒಂದು ವಾರದಿಂದ ನಿರಂತವಾಗಿ ಅರಣ್ಯ ನಾಶವಾಗುತ್ತಿದೆ.

ಈ ಭಾಗದಲ್ಲಿ ವ್ಯಾಪಕವಾಗಿರುವ ಬಂಡೆಯಲ್ಲಿ ಕ್ವಾರಿ ನಡೆಸಲು ಹಗಲು- ರಾತ್ರಿ ಕಾಡನ್ನು ನಾಶ ಮಾಡುತ್ತಿದ್ದಾರೆ. ನೂರಾರು ಮರಗಳ ಮಾರಣ ಹೋಮ ನಡೆದರೂ ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಗ್ರಾಮದ ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ವಿರೋಧಿಸಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಚಾಮರಾಜನಗರದ ಬಂಡೀಪುರದಲ್ಲೂ ದುಷ್ಕರ್ಮಿಗಳು ಕಾಡಿಗೆ ಬೆಂಕಿ ಹಚ್ಚಿದ್ದರು. ಕಾಡು ಪ್ರಾಣಿಗಳಿಗೆ ಬೇಸತ್ತು ಬಂಡೀಪುರ ಅರಣ್ಯಕ್ಕೆ ಬೆಂಕಿ ಹಾಕಿರೋದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದರು. ಇತ್ತೀಚೆಗೆ ಬಂಡೀಪುರ ಅರಣ್ಯದಂಚಿನ ಚೌಡಹಳ್ಳಿ, ಕಲೀಗೌಡನಹಳ್ಳಿ, ಹಂಗಳ ಮೊದಲಾದ ಕಡೆ ಹುಲಿ, ಚಿರತೆ, ಆನೆ ಗ್ರಾಮದತ್ತ ಮುಖ ಮಾಡಿದ್ದವು. ಸತತ ನಾಲ್ಕೈದು ದಿನ ಕಾರ್ಯಚರಣೆ ನಡೆಸಿದ್ರೂ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ವಿಫಲವಾಗಿದ್ದರು. ಹುಲಿಗೆ ಹೆದರಿದ ಕಾಡಂಚಿನ ಗ್ರಾಮಸ್ಥರು ಅರಣ್ಯಕ್ಕೆ ಬೆಂಕಿ ಇಟ್ಟಿದ್ದು, ಪರಿಣಾಮ ಸಾವಿರಾರು ಎಕರೆ ಪ್ರದೇಶ ಭಸ್ಮವಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *