ಸಹೋದರಿಯನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಚಾಕು ಇರಿದ ಅಪ್ರಾಪ್ತ!

ಬಾಗಲಕೋಟೆ: ಸಹೋದರಿಯನ್ನು (Sister) ಚುಡಾಯಿಸಿದ್ದಕ್ಕೆ ಅಪ್ರಾಪ್ತನೊಬ್ಬ (Minor) ಯುವಕನ ಮೇಲೆ ಚಾಕು ಇರಿದ ಘಟನೆ ಬಾಗಲಕೋಟೆಯ (Bagalkote) ನವನಗರದ 48ನೇ ಸೆಕ್ಟರ್‌ನಲ್ಲಿ ನಡೆದಿದೆ.

ಸಹೋದರಿಯನ್ನು ಚುಡಾಯಿಸಿದ ಮೊಹಮ್ಮದ್‌ ಆಸೀಫ್‌ ನದಾಫ್‌ ಮತ್ತು ಅಪ್ರಾಪ್ತನ ಮಧ್ಯೆ ಜಗಳ ಶುರುವಾಗಿದೆ. ನಂತರ ಮಾತಿಗೆ ಮಾತು ಬೆಳೆದು ಅಪ್ರಾಪ್ತ ಚಾಕು ಇರಿದಿದ್ದಾನೆ.

ಗಲಾಟೆ ಯಾಕಾಯ್ತು?
ಆಸೀಫ್‌ ಅಪ್ರಾಪ್ತನ ಸಹೋದರಿ ಸೈಕಲ್‌ ಅಡ್ಡಗಟ್ಟಿ ಚುಡಾಯಿಸಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆರಂಭದಲ್ಲಿ ಜಗಳ ನಡೆದಿತ್ತು. ಕಿತ್ತಾಟದ ವಿಚಾರ ತಿಳಿದು ಮುಸ್ಲಿಮ್‌ ಸಮಾಜದ ಹಿರಿಯರು ಇಬ್ಬರನ್ನು ಸಂಧಾನ ಮಾತುಕತೆಗೆ ಕರೆದಿದ್ದರು. ಇದನ್ನೂ ಓದಿ: ದಲಿತ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಸೂಸೈಡ್‌ ಆರೋಪ

ಸಂಧಾನ ಮಾತುಕತೆ ವೇಳೆ ಆಸೀಫ್‌ ಹಾಗೂ ಅಪ್ರಾಪ್ತ ಬಾಲಕನ ಮಧ್ಯೆ ಮತ್ತೆ ಜಗಳ ಶುರುವಾಗಿದೆ. ಜಗಳ ಜೋರಾಗುತ್ತಿದ್ದಂತೆ ಬಾಲಕ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಆಸೀಫ್‌ ತಲೆ, ಮೂಗು,ಕೆನ್ನೆಯ ಭಾಗಕ್ಕೆ  ಚಾಕು ಇರಿಯಲಾಗಿದೆ. ಇದನ್ನೂ ಓದಿ: ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

ಗಂಭೀರವಾಗಿ ಗಾಯಗೊಂಡ ಆಸೀಫ್‌ನನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ನವನಗರ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವಕನ ಪೋಷಕರು ಆಸ್ಪತ್ರೆಯ ಮುಂದೆ ಕಣ್ಣೀರಿಟ್ಟಿದ್ದಾರೆ.