ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ – ಪತಿ ವಿರುದ್ಧ ಪತ್ನಿ ದೂರು

ಮುಂಬೈ: ಅಪ್ರಾಪ್ತ ಮಗಳ ಮೇಲೆ 30 ವರ್ಷದ ತಂದೆಯೇ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.

POLICE JEEP

ಆರೋಪಿ ಬಿಹಾರದ ಮೂಲದವನಾಗಿದ್ದು, ಪ್ರಸ್ತುತ ತನ್ನ ಪತ್ನಿ ಮತ್ತು ಒಂಬತ್ತು ವರ್ಷದ ಮಗಳ ಜೊತೆಗೆ ನಾಗ್ಪುರ ನಗರದಿಂದ 40 ಕಿಮೀ ದೂರದಲ್ಲಿರುವ ಕಲ್ಮೇಶ್ವರ ಪಟ್ಟಣದ ಎಂಐಡಿಸಿ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಆರೋಪಿಯು ಕಳೆದ ಎರಡು ತಿಂಗಳಿನಿಂದ ಬಾಲಕಿಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ರಾಜ್ಯಪಾಲರನ್ನು ಕೂಡಲೇ ವಜಾಗೊಳಿಸಿ – ರಾಷ್ಟ್ರಪತಿಗಳಿಗೆ ಡಿಎಂಕೆ ಪತ್ರ

ಸೋಮವಾರ ಮತ್ತು ಮಂಗಳವಾರ ಮಧ್ಯರಾತ್ರಿ ಈ ಕೃತ್ಯವನ್ನು ಮತ್ತೆ ಎಸಗಲು ಪ್ರಯತ್ನಿಸಿದಾಗ, ಆರೋಪಿ ವಿರುದ್ಧ ಪತ್ನಿಯೇ ಕಲ್ಮೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಅತ್ಯಾಚಾರ ಮತ್ತು ಇತರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ರಾಜಕುಮಾರ್ ಹೆಸರಿನಲ್ಲಿ ಅಪ್ಪು ಅಮರ ಹೆಲ್ತ್ ಪ್ರೆವಿಲೈಜ್ ಕಾರ್ಡ್

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *