ಅಪ್ರಾಪ್ತ ಬಾಲಕಿ ಮದುವೆ: ಮಕ್ಕಳ ರಕ್ಷಣಾ ತಂಡವನ್ನ ಕಂಡು ವಧು-ವರ ಪರಾರಿ

ಕಲಬುರಗಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮದುವೆ ತಡೆಯಲು ಹೋದ ಮಕ್ಕಳ ರಕ್ಷಣಾ ತಂಡವನ್ನು ಕಂಡು ಮದುವೆ ಮಂಟಪದಿಂದ ವಧು-ವರರಿಬ್ಬರೂ ಪರಾರಿಯಾಗಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ತೆಂಗಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಭೀಮೇಶ್ವರ ದೇವಾಸ್ಥಾನದಲ್ಲಿ ಸೋಮವಾರ ಮಧ್ಯಾಹ್ನ ಗ್ರಾಮದ ಅಪ್ರಾಪ್ತ ಬಾಲಕಿಯೊಂದಿಗೆ ಕಲಬುರ್ಗಿಯ ಶಹಾಬಜಾರ್ ಬಡಾವಣೆ ನಿವಾಸಿಯಾದ 24ರ ಹರೆಯದ ಯುವಕನ ವಿವಾಹ ನಡೆಯುತ್ತಿತ್ತು.

ಈ ಬಗ್ಗೆ ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ಸಿ.ವಿ.ರಾಮನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ನೇತೃತ್ವದ ತಂಡ ಪೊಲೀಸರೊಂದಿಗೆ ದಾಳಿ ನಡೆಸಿತ್ತು. ಈ ವೇಳೆ ವಧು-ವರರಿಬ್ಬರೂ ಮಂಟಪದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿ ಟೆಂಟು, ಸ್ಟೇಜ್, ಕುರ್ಚಿ, ವಿವಿಧ ತರಹದ ಅಡುಗೆ, ಮದುವೆ ದಿಬ್ಬಣ ಇದ್ದ ಆಧಾರದ ಮೇಲೆ ಕಾಳಗಿ ಪೊಲೀಸ್ ಠಾಣೆಯಲ್ಲಿ ವಧುವಿನ ಪಾಲಕರು ಮತ್ತು ವರನ ತಾಯಿ, ದೇವಾಲಯದ ಅರ್ಚಕ ಶರಣಯ್ಯ ಮಠಪತ್ತಿ, ದೇವಾಲಯದ ಸಮಿತಿ ಅಧ್ಯಕ್ಷ ಸೋಮಶೇಖರ ಪಟ್ಟೆದ್ ಹಾಗೂ ಲಗ್ನ ಪತ್ರಿಕೆಯಲ್ಲಿ ಸುಖಾಗಮನ ಬಯಸುವವರ ವಿರುದ್ಧ ಪ್ರಕರಣ ದಾಖಲಾಗಿದೆ.

 

Comments

Leave a Reply

Your email address will not be published. Required fields are marked *