ಹೈದರಾಬಾದ್: ಬಾಲಕಿಯೊಬ್ಬಳು ತನ್ನ ಮದ್ಯವ್ಯಸನಿ ತಂದೆಯಿಂದ ದೈಹಿಕ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ಗ್ರಾಮದಲ್ಲಿ ನಡೆದಿದೆ.

ಬಾಲಕಿಯು ಮನೆಯಲ್ಲಿ ಒಬ್ಬಳೇ ಇದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಈಗಾಗಲೇ ಆಕೆಯ ತಂದೆಯನ್ನು ಬಂಧಿಸಿದ್ದಾರೆ. ಆರೋಪಿ ರೈತನಾಗಿದ್ದು, ಆತನ ಪತ್ನಿ ಒಂದು ವರ್ಷದ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆರೋಪಿಗೆ ಇಬ್ಬರು ಮಕ್ಕಳಿದ್ದು, ಪತ್ನಿಯ ಸಾವಿನ ನಂತರ ಮಕ್ಕಳಿಗೆ ಚಿತ್ರಹಿಂಸೆ ನೀಡಲಾರಂಭಿಸಿದನು. ಅವನ ಹಿರಿಯ ಮಗನೊಬ್ಬನು ಅಂಗಡಿಯೊಂದರಲ್ಲಿ ಕೆಲಸ ಮಾಡಲು ಪಟ್ಟಣಕ್ಕೆ ತೆರಳಿದ್ದು, ಅಪ್ಪನ ಟಾರ್ಚರ್ ತಡೆದುಕೊಳ್ಳಲಾಗದೇ ಅಲ್ಲಿಯೇ ಇರಲು ಪ್ರಾರಂಭಿಸಿದನು. ಇದನ್ನೂ ಓದಿ: ಮಾಟಕ್ಕೆ ಒಳಗಾದ ಮಹಿಳೆಗೆ ಚಾಟಿಯಿಂದ ಹೊಡೆದ ಪೂಜಾರಿ

ಆದರೆ ಮೃತ ಬಾಲಕಿಯು ತನ್ನ ಮದ್ಯವ್ಯಸನಿ ತಂದೆಯ ಚಿತ್ರಹಿಂಸೆಗೆ ನೊಂದು ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಈಗಾಗಲೇ ಬಂಧಿಸಿದ್ದೇವೆ ಎಂದು ಶಾದ್‍ನಗರ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಕುಶಾಲ್ಕರ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ

Leave a Reply