16ರ ಹುಡುಗಿಯ ಮೇಲೆ 7 ತಿಂಗಳ ಕಾಲ ನಾಲ್ವರಿಂದ ಗ್ಯಾಂಗ್‍ರೇಪ್

ಮುಂಬೈ: ನಾಲ್ವರು ಬಸ್ ನಿರ್ವಾಹಕರು ಏಳು ತಿಂಗಳ ಕಾಲ 16 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.

ಆರೋಪಿಗಳನ್ನು ಉಮೇಶ್ ಅಲಿಯಾಸ್ ವರ್ಷಾಪಾಲ್ ಮೊರೇಶ್ವರ್ ಮೆಶ್ರಾಮ್ (22), ಧರ್ಮಪಾಲ್ ದಾದರಾವ್ ಮೆಶ್ರಾಮ್ (22), ಆಶಿಶ್ ಕಾಶಿನಾಥ ಲೋಕಾಂಡೆ (25) ಮತ್ತು ಅಜಯ್ (22) ಎಂದು ಗುರುತಿಸಲಾಗಿದ್ದು, ನಾಲ್ವರನ್ನು ಮಂಕಪುರ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಸಂತ್ರಸ್ತೆ ನಾಗ್ಪುರ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದು, ಸ್ಟಾರ್ ಬಸ್ ಮೂಲಕ ಪ್ರಯಾಣಿಸುತ್ತಿದ್ದಳು. ದಿನಾ ಟ್ರಾವೆಲ್ ಮಾಡುತ್ತಿದ್ದರಿಂದ ಬಸ್ ಕಂಡಕ್ಟರ್ ಆರೋಪಿ ಧರ್ಮಾಪಾಲ್ ಮೆಶ್ರಾಮ್ ಮೊದಲಿಗೆ ಆಕೆಯನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಂಡಿದ್ದಾನೆ. ಈ ವೇಳೆ ಆತ ತನ್ನ ಗುರುತನ್ನು ಮರೆಮಾಚಲು ‘ಅತುಲ್’ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ನಂತರ ಇಬ್ಬರು ಮೊಬೈಲ್ ನಂಬರ್ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 1, 2018 ರಂದು ಬಾಡಿಗೆ ಮನೆಯಲ್ಲಿ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ತಾನು ಅತ್ಯಾಚಾರ ಮಾಡಿದ ವಿಷಯದ ಬಗ್ಗೆ ಸ್ನೇಹಿತರಿಗೆ ಹೇಳಿದ್ದಾನೆ. ಬಳಿಕ ಅವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯ ಮೇಲೆ ಜುಲೈ 1, 2018 ರಿಂದ ಜನವರಿ 31, 2019 ರವರೆಗೆ ಗ್ಯಾಂಗ್‍ರೇಪ್ ಮಾಡಿದ್ದು, ಏಳು ತಿಂಗಳ ಕಾಲ ಚಿತ್ರಹಿಂಸೆ ಕೊಟ್ಟಿದ್ದಾರೆ.

ಸಂತ್ರಸ್ತೆ ತಾನು ಗರ್ಭಿಣಿಯಾಗಿದ್ದೇನೆ ಎಂದು ಶಂಕಿಸಿದ್ದಾಳೆ. ಆದರೆ ಅವರು ಕುಟುಂಬದವರು ದಿನಕೂಲಿ ಕೆಲಸ ಮಾಡುತ್ತಿದ್ದು, ಈ ಬಗ್ಗೆ ತಿಳಿದರೆ ಭಯ ಪಡುತ್ತಾರೆ ಎಂದು ಫೆಬ್ರವರಿ 28 ರಂದು ಮನೆ ಬಿಟ್ಟು ಹೋಗಿದ್ದಾಳೆ. ಮಗಳು ಮನೆ ಬಿಟ್ಟು ಹೋದ ನಂತರ ಆಕೆಯ ಪೋಷಕರು ಪೊಲೀಸರಿಗೆ ನಾಪತ್ತೆ ದೂರನ್ನು ದಾಖಲಿಸಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯ ವೇಳೆ ಹುಡುಗಿ ರಾಯ್ಪುರದಲ್ಲಿ ಇರುವ ಬಗ್ಗೆ ಮಾಹಿತಿ ದೊರೆತಿದೆ. ನಂತರ ಪೊಲೀಸ್ ತಂಡವು ರಾಯ್ಪುರದಿಂದ ನಾಗ್ಪುರಕ್ಕೆ ಸಂತ್ರಸ್ತೆಯನ್ನು ಕರೆದುಕೊಂಡು ಬಂದಿದ್ದಾರೆ. ತನಿಖೆ ಸಂದರ್ಭದಲ್ಲಿ ಸಂತ್ರಸ್ತೆ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾಳೆ.

ಸದ್ಯಕ್ಕೆ ಸಂತ್ರಸ್ತೆಯ ದೂರಿನ ಆಧಾರದ ಮೇರೆಗೆ ಸೆಕ್ಷನ್ 376 (2) ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *