ಅಪ್ರಾಪ್ತ ಮಗಳ ಮೇಲೆ ಪಾಪಿ ತಂದೆಯಿಂದ ಅತ್ಯಾಚಾರ

ಚಾಮರಾಜನಗರ: ತಂದೆಯೇ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.

ಮಹಮದ್ ಮುಷ್ತಾಕ್ ಅತ್ಯಾಚಾರ ಎಸಗಿರುವ ಪಾಪಿ ತಂದೆ. ಚಾಮರಾಜನಗರದ ಗಾಳಿಪುರ ನಿವಾಸಿಯಾಗಿರುವ ಮುಷ್ತಾಕ್ ವೃತ್ತಿಯಲ್ಲಿ ಆಟೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು. ಮುಷ್ತಾಕ್‍ಗೆ ಇಬ್ಬರು ಪತ್ನಿಯರಿದ್ದು, ಕಳೆದ ತಿಂಗಳು ಜನವರಿ 31ರಂದು ಎರಡನೇ ಪತ್ನಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದರು.

ಬೆಂಗಳೂರಿಗೆ ಹೋಗುವ ಸಂದರ್ಭದಲ್ಲಿ ಎರಡನೇ ಪತ್ನಿ ತನ್ನ ಮಗಳನ್ನು ಮುಷ್ತಾಕ್ ಮೊದಲ ಪತ್ನಿ ಮನೆಯಲ್ಲಿ ಬಿಟ್ಟು ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ಪಾಪಿ ತಂದೆ ಈ ಹೀನ ಕೃತ್ಯವೆಸಗಿದ್ದಾರೆ. ಮೊದಲ ಪತ್ನಿಯ ಮನೆಯಲ್ಲಿ ಉಳಿದಿದ್ದ ಎರಡನೇ ಪತ್ನಿಯ ಮಗಳನ್ನೇ ತಂದೆ ಅತ್ಯಾಚಾರ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಅತ್ಯಾಚಾರ ಎಸಗಿರುವ ಪತಿಯ ವಿರುದ್ಧ ಪತ್ನಿಯೇ ಚಾಮರಾಜನಗರ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಪೊಲೀಸರು ಪೊಕ್ಸೋ ಕಾಯ್ದೆಯಡಿ ಬಂಧನಕ್ಕೊಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಾಪಿ ತಂದೆಯ ದುಷ್ಕೃತ್ಯಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *