4 ವರ್ಷದ ಬಾಲಕಿಗೆ 14ರ ಬಾಲಕನಿಂದ ಲೈಂಗಿಕ ಕಿರುಕುಳ

RAPE

ಚೆನ್ನೈ: ನಾಲ್ಕು ವರ್ಷದ ಬಾಲಕಿಗೆ 14 ವರ್ಷದ ಬಾಲಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಗ್ರಾಮದಲ್ಲಿ ನಡೆದಿದೆ.

ಬಾಲಕ ತೂತುಕುಡಿಯ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದು, ಆತನ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿ ನೆರೆಮನೆಯವಳಾಗಿದ್ದಾಳೆ. ಬಾಲಕನಿಗೆ ತಂದೆ ಇಲ್ಲ. ಆದರೆ ಆತ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ. ಶನಿವಾರ ಬಾಲಕಿ ಹಾಗೂ ಆಕೆಯ ಸಹೋದರ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಆಕೆಯೊಂದಿಗೆ ಆಟವಾಡುವ ನೆಪದಲ್ಲಿ ಆರೋಪಿ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಆಕೆಯನ್ನು ಕೆಲವು ಮುಳ್ಳಿನ ಪೊದೆ ಬಳಿ ಏಕಾಂತವಾಗಿರುವ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆಯಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

ಬಾಲಕಿಗೆ ತಾಯಿ ಸ್ನಾನ ಮಾಡಿಸುವ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ನಂತರ ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಬಾಲಕಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದನ್ನು ದೃಢಪಟ್ಟಿದೆ. ಈ ಘಟನೆ ಕುರಿತಂತೆ ಬಾಲಕಿ ತಾಯಿ ವಿಲತ್ತಿಕುಲಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯ ವಿರುದ್ಧ ಸೂಕ್ತ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

POLICE

ಇದೀಗ ಬಾಲಕನನ್ನು ಬಾನುವಾರ ಪೊಲೀಸರು ಬಂಧಿಸಿದ್ದು, ತಿರುನಲ್ವೇಲಿಯಲ್ಲಿರುವ ಮಕ್ಕಳ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ಇಂದು ಕೇಂದ್ರ ಬಜೆಟ್ – ಆರ್ಥಿಕತೆಗೆ ಸಿಗುತ್ತಾ ‘ಬೂಸ್ಟರ್ ಡೋಸ್’..?


Boy, Girl, Sexual Harassment, Chennai

Comments

Leave a Reply

Your email address will not be published. Required fields are marked *