ಸಚಿವರ ಕಣ್ಣ ಮುಂದೆಯೇ ಗೋಲ್ಮಾಲ್-50 ಕೆಜಿ ಚೀಲದಲ್ಲಿ 48 ಕೆಜಿ ಅಕ್ಕಿ

-2 ಕೆಜಿ ಅಕ್ಕಿಯನ್ನ ಇಲಿ, ಹೆಗ್ಗಣ ತಿಂತಂತೆ

ಬೆಂಗಳೂರು: ಇಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಜಮೀರ್ ಅಹಮದ್ ದಿಡೀರ್ ಅಂತಾ ನಗರದ ಯಶವಂತಪುರದ ಗೋಡಾನ್ ಮತ್ತು ಸೊಸೈಟಿಗಳಿಗೆ ಭೇಟಿ ನೀಡಿದರು. ಒಂದು ಕ್ಷಣ ಸಚಿವರನ್ನು ನೋಡಿದ ಅಧಿಕಾರಿಗಳು ಒಂದು ಕ್ಷಣ ತಬ್ಬಿಬ್ಬಾದರು. ತಮ್ಮ ಮುಂದೆಯೇ ಗೋಲ್ಮಾಲ್ ನಡೆಯುತ್ತಿದ್ದರು ಸಚಿವರು ಏನನ್ನು ಪರಿಶೀಲಿಸದೇ ನಾಮಾಕವಸ್ಥೆ ಭೇಟಿ ಎಂಬಂತೆ ಹೊರ ನಡೆದರು.

ಆರಂಭದಲ್ಲಿ ಗೋಡಾನ್ ಗಳಲ್ಲಿ ವಿದ್ಯುತ್ ದೀಪಗಳು ಎಲ್ಲವನ್ನು ಕೆಟ್ಟಿದ್ದರಿಂದ ದಾಸ್ತಾನು ಕೇಂದ್ರ ಕತ್ತಲುಮಯವಾಗಿತ್ತು. ಅದೇಕೆ ಲೈಟ್ಸ್ ಹಾಕಿಲ್ಲ ಅಂತಾ ಸಿಬ್ಬಂದಿ ಮೇಲೆ ಸಚಿವರು ಗರಂ ಆದರು. ಸಚಿವರು ಎದುರು 50 ಕೆಜಿ ಅಕ್ಕಿ ಚೀಲ 48 ಕೆಜಿ ತೂಗುತ್ತಿತ್ತು. ಪ್ರತಿ ಚೀಲದಲ್ಲಿ 2 ಕೆಜಿ ಅಕ್ರಮ ಕಂಡರೂ ಸಚಿವರು ಮಾತ್ರ ಯಾವುದನ್ನು ಪ್ರಶ್ನೆ ಮಾಡಲು ಹೋಗಲಿಲ್ಲ. ಗೋಡಾನ್ ಗಳಲ್ಲಿ ಅಕ್ರಮ ದಾಸ್ತಾನು ಸಂಗ್ರಹಣೆ ಮಾಡಲಾಗುತ್ತಿದ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಚಿವರು ದಾಸ್ತನು ಕೇಂದ್ರಗಳಿಗೆ ಭೇಟಿ ನೀಡಿದ್ದರು.

ಯಶವಂತಪುರ ಗೋಡಾನ್ ಒಂದರಲ್ಲಿ ತುಕ್ಕು ಹಿಡಿದ ಗೋಧಿ ಸಚಿವರ ಕಣ್ಣಿಗೆ ಬಿತ್ತು. ಇದ್ರಿಂದ ಕೆರಳಿದ ಸಚಿವರು ಅಲ್ಲಿನ ಸಿಬ್ಬಂದಿಗೆ ವಾರ್ನಿಂಗ್ ಕೊಟ್ಟು, ಕಳಪೆ ಗುಣಮಟ್ಟದ ಗೋಧಿಯನ್ನ ಸರ್ಕಾರಿ ಆಹಾರ ಗುಣಮಟ್ಟ ತಪಾಸಣಾ ಕೇಂದ್ರಕ್ಕೆ ಕಳುಹಿಸಲಾಯಿತು. ಪರಿಶೀಲನೆ ಬಳಿಕ ಮಾತನಾಡಿದ ಸಚಿವರು, ಇಲಿ ಹೆಗ್ಗಣಗಳು ತಿಂದಿರುತ್ತವೆ. ಹಾಗಾಗಿ 50 ಕೆಜಿ ಅಕ್ಕಿ ಚೀಲದಲ್ಲಿ 2 ಕೆಜಿ ಕಡಿಮೆ ಆಗಿದೆ. ಪ್ರತಿಯೊಂದನ್ನು ತೂಕ ಮಾಡಿಯೇ ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಇವತ್ತು ರಜೆ ಇದ್ದರು ಗೋಡಾನ್ ಗಳು ತೆರದಿದ್ದು, ಸಿಬ್ಬಂದಿ ಕೆಲಸದಲ್ಲಿ ನಿರತರಾಗಿದ್ದರು. ಸಚಿವರು ಬರುವ ಮುನ್ಸೂಚನೆ ಅಧಿಕಾರಿಗಳಿಗೆ ಮೊದಲೇ ಸಿಕ್ಕಿತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ನಡುವೆ ಸಚಿವರು ಸಹ ಒಂದು ವರ್ಷದಿಂದ ಗೋದಾಮಿನಲ್ಲಿರುವ ಹುಳು ತಿಂದಿರುವ ಗೋಧಿಯತ್ತ ಗಮನ ಕೊಡಲೇ ಇಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *