ಮೈಸೂರು: ಸೌದಿಯಲ್ಲಿ ಮೈಸೂರು ಮೂಲದ ವ್ಯಕ್ತಿ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಮಾಡಿದ ಟ್ವೀಟ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿದ್ದಾರೆ.
ಮಾರ್ಚ್ 25 ರಂದು ಶಬ್ಬಿರ್ (24) ಎಂಬವರು ಸೌದಿಯಲ್ಲಿ ಮೃತರಾಗಿದ್ದರು. 9 ತಿಂಗಳ ಹಿಂದೆ ಡ್ರೈವರ್ ಕೆಲಸಕ್ಕಾಗಿ ಶಬ್ಬಿರ್ ಸೌದಿಗೆ ತೆರಳಿದ್ದರು. ಮೂರು ದಿನಗಳ ಹಿಂದೆ ನೇಣುಬಿಗಿದ ಸ್ಥಿತಿಯಲ್ಲಿ ಶಬ್ಬೀರ್ ಶವ ಪತ್ತೆಯಾಗಿತ್ತು. ಶವದ ಸ್ಥಿತಿ ನೋಡಿದ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪ ಮಾಡಿದ್ದರು.

ಶಬ್ಬಿರ್ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಅಲ್ಲಿನ ಕಂಪೆನಿ ಮಾಲೀಕರು 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಶಬ್ಬಿರ್ ಮೃತದೇಹ ತರಿಸಿಕೊಡುವಂತೆ ಸಂಸದ ಪ್ರತಾಪ್ ಸಿಂಹಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಪ್ರತಾಪ್ ಸಿಂಹ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ಟ್ವೀಟ್ ಕೂಡ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸುಷ್ಮಾ ಸ್ವರಾಜ್ ಭಾರತೀಯ ರಾಯಭಾರಿ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Which city
— India in Saudi Arabia (@IndianEmbRiyadh) March 27, 2017
Spoken to Indian embassy, it's taking time since it is suspicious suicide @IndianEmbRiyadh @SushmaSwaraj @ajxtopcop
— Prathap Simha (@mepratap) March 27, 2017
Pl give his name and passport no @ajxtopcop
— India in Saudi Arabia (@IndianEmbRiyadh) March 27, 2017
Pratap – Indian Embassy is attending to this. @mepratap @IndianEmbRiyadh @syedzabi85 @ajxtopcop
— Sushma Swaraj (@SushmaSwaraj) March 28, 2017
Very kind of you madam. Thank u so much. @IndianEmbRiyadh @syedzabi85 @ajxtopcop
— Prathap Simha (@mepratap) March 28, 2017

Leave a Reply